ದೇಹೂ: ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವೇಳೆ ಸಂತ ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ದೇಹೂ: ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವೇಳೆ ಸಂತ ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ದೇಹೂನಲ್ಲಿ ಮಂಗಳವಾರ 17ನೇ ಶತಮಾನದ ಸಂತ ತುಕಾರಾಂ ಅವರ ಶಿಲಾ ದೇವಸ್ಥಾನ ಉದ್ಘಾಟಿಸಿದ ಅವರು ಪಂಢರಪುರದ ವಿಠಲ ಮಂದಿರ ತೀರ್ಥಯಾತ್ರೆ ಕೈಗೊಂಡ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಮೋದಿ ಅವರಿಗೆ ತುಕಾರಾಂ ಪಗಡಿ ತೊಡಿಸಿ ಗೌರವಿಸಲಾಯಿತು. ತುಕಾರಾಂ ಅವರು ಭಕ್ತಿ ಚಳವಳಿಯಲ್ಲಿ ಪ್ರಮುಖರಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಅವರಂತಹ ನಾಯಕರ ಜೀವನದಲ್ಲಿ ತುಕಾರಾಂ ಅವರು ಮುಖ್ಯ ಪಾತ್ರ ವಹಿಸಿದ್ದರು ಎಂದು ಕೊಂಡಾಡಿದರು.