ಕುಂಬಳೆ : ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿರುವ ಕ್ಷೌರಿಕ ವೃತ್ತಿ ನಡೆಸುವ ಬಂಡಾರಿ ಸಮುದಾಯವನ್ನು ಅತಿ ಹಿಂದುಳಿದ ವಿಭಾಗಕ್ಕೆ (ಒ. ಇ.ಸಿ) ಸೇರಿಸುವಂತೆ ಬಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕ ಸಮ್ಮೇಳನ ಒತ್ತಾಯಿಸಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ.ಹಿಂದುಳಿದ ವಿಭಾಗವಾದ ಈ ಸಮುದಾಯವನ್ನು ಅತಿ ಹಿಂದುಳಿದ ವಿಭಾಗದ ಸೌಲಭ್ಯಗಳು ದೊರೆಯುವ ರೀತಿಯಲ್ಲಿ ಅಗತ್ಯವಾಗಿ ಆ ವಿಭಾಗದಲ್ಲಿ ಸೇರಿಸಬೇಕೆಂದು ಮನವಿ ಸಲ್ಲಿಸಲು ವಾರ್ಷಿಕ ಸಮ್ಮೇಳನದಲ್ಲಿ ನಿರ್ಧರಿಸಲಾಗಿದೆ.
ಸೂರಂಬೈಲ ಶ್ರೀ ಗಣೇಶ ಸಭಾಭವದಲ್ಲಿ ನಡೆದ ವಾರ್ಷಿಕ ಸಮ್ಮೇಳನವನ್ನು ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯೆ ಅನಿತಾ ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ವಸಂತ ಕುಮಾರ್ ಸಿ. ಕೆ. ಅಧ್ಯಕ್ಷತೆ ವಹಿಸಿದರು. ಆನಂದ ಬಂಡಾರಿ ಸೂರಂಬೈಲು , ಕೇಳು ಭಂಡಾರಿ ಉಡುಪಿ, ಗೋಪಾಲ ಬಂಡಾರಿ ಕುಂಟಾರು, ದೇವಕಿ ಅಣೆಬೈಲು ಶುಭ ಹಾರೈಸಿದರು. ವಿವಿಧ ಗ್ರಾಮ ಪಂಚಾಯತಗಳಿಗೆ ಆಯ್ಕೆಯಾದ ಸಮಾಜ ಭಾಂಧವರಾದ ಅನಿತಾ, ಪ್ರಮೋದ್ ಪೆಲರ್ಂಪಾಡಿ, ಜ್ಯೋತಿ ಅಂಬಟೆ ಮೂಲೆ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ನಿರೂಪಿಸಿದ ಸತ್ಯನಾರಾಯಣ ಬದಿಯಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಮೈರೆ ವರದಿ ಹಾಗೂ ಕೋಶಾಧಿಕಾರಿ ಸಂಜೀವ ಬಂಡಾರಿ ಲೆಕ್ಕಪತ್ರ ಮಂಡಿಸಿದರು. ಉದನೇಶ್ವರ ವಂದಿಸಿದರು.
ಮುಂದಿನ ಸಾಲಿನ ಪದಾಧಿಕಾರಿಗಳಾಗಿ ವಸಂತ ಕುಮಾರ್ ಸಿ. ಕೆ. ಅಧ್ಯಕ್ಷರು, ಸಂಜೀವ ಬಂಡಾರಿ ಉಪಾಧ್ಯಕ್ಷರು, ಉದನೇಶ್ವರ ಕಾರ್ಯದರ್ಶಿ, ವಿನೋದ್ ಕುಂಟಾರು ಜತೆ ಕಾರ್ಯದರ್ಶಿ, ಸತ್ಯನಾರಾಯಣ ಕೋಶಾಧಿಕಾರಿ, ರಾಜೇಶ ಮೈರೆ ಸಂಘಟನಾ ಕಾರ್ಯದರ್ಶಿ ಆಯ್ಕೆಯಾದರು.