HEALTH TIPS

ಹೃದಯಾಘಾತ ಮತ್ತು ಎದೆಯುರಿಗೂ ನಡುವೆ ಇರುವ ವ್ಯತ್ಯಾಸವೇನು?

 ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಎದೆಯಲ್ಲಿ ನೋವು ಬಂದರೆ, ಸಾಕು ನಮ್ಮ ಬುದ್ಧಿ ಯೋಚಿಸುವುದು ಹೃದಯಾಘಾತದ ಬಗ್ಗೆಯೇ..ಅದು ಎದೆಯುರಿಯಿಂದ ಬಂದಿರುವ ಸಹಜ ನೋವಾದರೂ ಸರಿ ಮನಸ್ಸು ಕೆಟ್ಟದ್ದನ್ನೇ ಯೋಚಿಸಲು ಶುರು ಮಾಡುವುದು. ಯಾಕಂದ್ರೆ ಸದ್ಯದ ಪರಿಸ್ಥಿತಿಗೆ ಹಾಗಾಗಿದೆ.. ವಯಸ್ಕರು ಸಹ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ, ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದಕ್ಕೇ ಎದೆನೋವು ಬಂದಾಕ್ಷಣವೇ, ಹೃದಯಾಘಾತದ ಯೋಚನೆ ಬರುವುದು. ಅದಕ್ಕಾಗಿ, ಇವೆರಡರ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಇದರಿಂದ, ಎಲ್ಲದಕ್ಕೂ ಗಾಬರಿಯಾಗುವುದನ್ನು ತಡೆಯಬಹುದು, ಜೊತೆಗೆ ಮುಂಜಾಗೃತೆ ವಹಿಸಲು ಸಹಾಯ ಅಗುವುದು. ಹಾಗಾದರೆ, ಬನ್ನಿ ಹೃದಯಾಘಾತ ಮತ್ತು ಎದೆಯುರಿ ನಡುವಿನ ವ್ಯತ್ಯಾಸವನ್ನು ತಿಳಿಯೋಣ ಬನ್ನಿ

.ಹೃದಯಾಘಾತ ಮತ್ತು ಎದೆಯುರಿ ನಡುವಿನ ವ್ಯತ್ಯಾಸವನ್ನು ಈ ಕೆಳಗೆ ನೀಡಲಾಗಿದೆ:

ಹೃದಯಾಘಾತ ಎಂದರೇನು?:

ಹೃದಯಾಘಾತವು ರಕ್ತನಾಳಗಳ ಸಮಸ್ಯೆಯಾಗಿದ್ದು, ಇದು ಹೃದಯದ ಸ್ನಾಯುವಿನ ಭಾಗಕ್ಕೆ ರಕ್ತ ಪೂರೈಕೆಯ ಕೊರತೆಯಿಂದಾಗಿ ಸಂಭವಿಸುತ್ತದೆ. ಇದು ಹೃದಯದ ಕಾರ್ಯನಿರ್ವಹಣೆ ನಿಲ್ಲಲು ಕಾರಣವಾಗಬಹುದು. ವ್ಯಕ್ತಿಯು ಪ್ರತಿಕ್ರಿಯಿಸದಿದ್ದಾಗ ಮತ್ತು ನಾಡಿಮಿಡಿತ ಹೊಂದಿರದಿದ್ದಾಗ ಇದನ್ನು ಹೃದಯ ಸ್ತಂಭನ ಅಥವಾ ಹೃದಯಾಘಾತ ಎಂದೂ ಕರೆಯುತ್ತಾರೆ. ಹೃದಯಾಘಾತ ಸಂಭವಿಸಲು ಮೊದಲು ಕೆಲವೊಂದು ಲಕ್ಷಣಗಳು ಕಂಡುಬರುತ್ತವೆ.

ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಎದೆ ನೋವು, ಒತ್ತಡ, ಭಾರ, ಪೂರ್ಣತೆ ಅಥವಾ ನೋವಿನಿಂದ ಕೂಡಿರುತ್ತದೆ. ಎದೆಯಲ್ಲಿ ಜೋರಾದ ನೋವು ಬರುವ ಜೊತೆಗೆ ಎದೆಗೆ ತುಂಬಾ ಭಾರವಾದ ವಸ್ತು ಬಂದು ಬಿದ್ದಂರೆ ಭಾಸವಾಗುವುದು. ಹೃದಯಾಘಾತದ ಸಮಯದಲ್ಲಿ ನೋವು ಸಾಮಾನ್ಯವಾಗಿ ಎದೆಯ ಮಧ್ಯ-ಎಡವಾಗಿರುತ್ತದೆ. ಜೊತೆಗೆ ಎರಡೂ ತೋಳುಗಳು, ಕುತ್ತಿಗೆ, ಮೇಲಿನ ಅಥವಾ ಮಧ್ಯದ ಬೆನ್ನಿನಲ್ಲೂ ನೋವು ಕಾಣಿಸಿಕೊಳ್ಳುತ್ತವೆ. ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಿಲ್ಲದೆ ಇರುವ ಸಮಯದಲ್ಲಿ ಪಾದ, ಕಾಲು ಮತ್ತು ಹಿಂಗಾಲು ಊದಿಕೊಳ್ಳುವುದು. ಕೆಲವರಲ್ಲಿ ಆತಂಕ ಹೆಚ್ಚಾಗಿ, ತಲೆತಿರುಗುವಿಕೆ, ಪ್ರಜ್ಞೆ ತಪ್ಪುವಂತಹ ಸ್ಥಿತಿಯೂ ಎದುರಾಗಬಹುದು. ಅಗ ತಕ್ಷಣ ವೈದ್ಯರ ಬಳಿ ಕರೆದೊಯ್ಯಬೇಕು.

ಪ್ರಿಂಜ್‌ಮೆಟಲ್‌ ಆಂಜಿನಾ ಎಂದರೇನು?:

ಇದು ಒಂದು ರೀತಿಯ ಎದೆ ನೋವು, ಇದು ಹೃದಯಾಘಾತದ ನೋವಿನಂತೆಯೇ ಇರುತ್ತದೆ. ಆದರೆ, ಇದು ಹೃದಯಕ್ಕೆ ಕಡಿಮೆ ರಕ್ತದ ಪೂರೈಕೆಯಿಂದ ಉಂಟಾಗುವುದಿಲ್ಲ, ಬದಲಿಗೆ ರಕ್ತನಾಳದ ಕಿರಿದಾಗುವಿಕೆಯಿಂದ ಉಂಟಾಗುತ್ತದೆ. ಆಂಜಿನಾ ಹೊಂದಿರುವ ಜನರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ ಇಂತಹವರು ನಿರಂತರ ವೈದ್ಯಕೀಯ ಆರೈಕೆಯಲ್ಲಿರಬೇಕು. ಆಂಜಿನಾ ನೋವು ತಾತ್ಕಾಲಿಕವಾಗಿರುತ್ತದೆ. ವಿಶ್ರಾಂತಿ ಅಥವಾ ಔಷಧಿಗಳ ನಂತರ ಸಾಮಾನ್ಯವಾಗಿ ಹೋಗುತ್ತದೆ.

ಪ್ರಿಂಜ್‌ಮೆಟಲ್‌ನ ಆಂಜಿನಾದ ಲಕ್ಷಣ ನೋಡುವುದಾದರೆ, ಇದು ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಹೆಚ್ಚಳವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಇದು ತೀವ್ರವಾದ ಒತ್ತಡದ ಜೊತೆಗೆ ನೋವು ಕಾಣಿಸಿಕೊಳ್ಳುತ್ತದೆ. ಮುಂದೆ ಮೂರ್ಛೆ ಹೋಗುವುದು, ಗೊಂದಲ, ದುಃಖ ಮೊದಲಾದ ಲಕ್ಷಣಗಳನ್ನು ಹೊಂದಿರಬಹುದು. ಇದು ಐದು ರಿಂದ ಹತ್ತು ನಿಮಿಷಗಳವರೆಗೆ ಇರುತ್ತದೆ, ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಇದು 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ತಲುಪುತ್ತದೆ. ಅದಕ್ಕಿಂತಲೂ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಬೇಕು.

ಎದೆಯುರಿ ಎಂದರೇನು? :

ಎದೆಯುರಿ ವಾಸ್ತವವಾಗಿ ಒಂದು ಲಕ್ಷಣವಾಗಿದ್ದು, ಇದು ರೋಗವಲ್ಲ. ಇದು ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗುವ ನೋವು. ಅಂದರೆ, ಹೊಟ್ಟೆಯಿಂದ ಆಮ್ಲೀಯ ದ್ರವ ಅನ್ನನಾಳದ ಮೂಲಕ ಹೊರಬರಲು ಯತ್ನಿಸಿದಾಗ ಹೊಟ್ಟೆಯ ಮೇಲ್ಭಾಗದಲ್ಲಿ ಉಂಟಾಗುವ ಸುಡುವ ಸಂವೇದನೆಯಾಗಿದೆ. ನಾವು ತಿನ್ನುವ ಯಾವುದೋ ಒಂದು ಆಹಾರದಲ್ಲಿ ಆಮ್ಲೀಯ ಅಂಶ ಇದ್ದರೆ, ಇಂತಹ ನೋವು ಉಂಟಾಗುತ್ತದೆ. ಇದರಿಂದ ಹುಳಿತೇಗು, ವಾಕರಿಕೆ ಹಾಗೂ ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಉಂಟಾಗುತ್ತದೆ. ಎದೆಯುರಿಯಿಂದ ಉಂಟಾಗುವ ನೋವು ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಸಂಭವಿಸುತ್ತದೆ. ಆದರೆ, ಇದು ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ ಎಂಬುದನ್ನು ನೆನಪಿಡಿ. ಇದನ್ನು ಕೆಲವೊಂದು ಆಹಾರ ಬದಲಾವಣೆ ಹಾಗೂ ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ನಿವಾರಿಸಬಹುದು. ಆದರೆ, ಎದೆಯಲ್ಲಿ ನೋವು ಬರುವುದರಿಂದ, ಈ ಎರಡೂ ವಿಚಾರಗಳ ಬಗ್ಗೆ ಗೊಂದಲ ಉಂಟಾಗುತ್ತದೆ.

ಹೃದಯಾಘಾತ ಮತ್ತು ಎದೆಯುರಿ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ?

:ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಮಧ್ಯವಯಸ್ಕರಲ್ಲಿ, ಹೃದಯಾಘಾತ ಮತ್ತು ಆಂಜಿನಾಗಳ ಸಂಭವವು ಹೆಚ್ಚುತ್ತಿದೆ. ಜಡ ಜೀವನಶೈಲಿ, ಮಧುಮೇಹ, ಬೊಜ್ಜು, ಧೂಮಪಾನ ಮುಂತಾದ ಅಂಶಗಳು ಇದಕ್ಕೆ ಕಾರಣವಾಗಿವೆ. ಹೃದ್ರೋಗಗಳ ಲಕ್ಷಣಗಳು ಮತ್ತು ಚಿಹ್ನೆಗಳು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತವೆ. ಕೆಲವೊಮ್ಮೆ ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್‌ನಿಂದ ಉಂಟಾಗುವ ಎದೆಯುರಿ, ಆಂಜಿನಾ/ಹೃದಯಾಘಾತದ ಲಕ್ಷಣಗಳಂತೆಯೇ ಇರಬಹುದು. ಆಗ ಇವುಗಳನ್ನು ಪ್ರತ್ಯೇಕಿಸಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಈ ಕೆಳಗಿನ ವ್ಯತ್ಯಾಸಗಳನ್ನು ಗಮನಿಸಿ, ಜಾಗೃತಿ ವಹಿಸಬಹುದು.

ಆಸಿಡಿಟಿ ಅಥವಾ ಡಿಸ್ಪೆಪ್ಸಿಯಾದಿಂದ ಉಂಟಾದ ನೋವು ಎದೆಯಲ್ಲಿ ಉರಿಯನ್ನು ಉಂಟುಮಾಡಬಹುದು. ಇದು ಸಾಮಾನ್ಯವಾಗಿ ಭಾರೀ ಊಟ ಅಥವಾ ಅತಿಯಾಗಿ ತಿಂದ ನಂತರ ಸಂಭವಿಸುತ್ತದೆ. ಮತ್ತೊಂದೆಡೆ, ಆಂಜಿನಾ ಅಥವಾ ಹೃದಯಾಘಾತದ ಎದೆ ನೋವು ತೀವ್ರವಾದ ನೋವನ್ನು ಹೊಂದಿರಬಹುದು. ಭಾರದ ಭಾವನೆ ಮತ್ತು ನೋವು ಮುಖ್ಯವಾಗಿ ಎದೆಯ ಎಡಭಾಗದಲ್ಲಿ ಪ್ರಾರಂಭವಾಗುತ್ತದೆ. ಇದು ನಂತರ ತೋಳು ಮತ್ತು ಭುಜದ ಪ್ರದೇಶಕ್ಕೆ ಹರಡುತ್ತದೆ. ಅದರ ತೀವ್ರತೆಯು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, ನಮಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೃದಯಾಘಾತದ ನೋವು ಹೆಚ್ಚಾಗಿ ಉಸಿರಾಟದ ತೊಂದರೆ ಅಥವಾ ವೇಗದ ಉಸಿರಾಟ, ಹೆಚ್ಚು ಬೆವರುವಿಕೆ ಮತ್ತು ವೇಗದ ಹರದಯ ಬಡಿತಗಳನ್ನು ಹೊಂದಿರಬಹುದು. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಅಧಿಕ ಕೊಲೆಸ್ಟ್ರಾಲ್‌ನಂತಹ ಕೊಮೊರ್ಬಿಡ್ ಪರಿಸ್ಥಿತಿ ಹೊಂದಿರುವ ರೋಗಿಗಳು ಈ ರೋಗಲಕ್ಷಣಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಆದ್ದರಿಂದ, ಹೃದಯಾಘಾತ, ಆಂಜಿನಾ ಅಥವಾ ಎದೆಯುರಿಯಾಗಿರಬಹುದು, ಮೂಲ ಕಾರಣವನ್ನು ಕಂಡುಹಿಡಿಯಲು ನೀವು ಎದೆನೋವು ಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries