ಕುಂಬಳೆ: ಹಿರಿಯ ಧಾರ್ಮಿಕ, ಸಾಮಾಜಿಕ,ಸಾಂಸ್ಕೃತಿಕ ನೇತಾರ ಗಂಗಾಧರ ಶೆಟ್ಟಿ ಕುದುರೆಪ್ಪಾಡಿ ಗುತ್ತು(64) ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾದರು.
ಶ್ರೀ ರಾಜರಾಜೇಶ್ವರೀ ಭಜನಾ ಸಂಘದ ಅಧ್ಯಕ್ಷರಾಗಿದ್ದ ಅವರು ಉತ್ತಮ ಭಜನಾ ಪಟುವಾಗಿ ಯಕ್ಷಗಾನ ಫೋತ್ಸಹಕರಾಗಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಮಕ್ಕಳಾದ ಹವ್ಯಾಸಿ ಯಕ್ಷಗಾನ ಭಾಗವತ ಸಚಿನ್ ಶೆಟ್ಟಿ ಕುದುರೆಪ್ಪಾಡಿ ಸಹಿತ ಇಬ್ಬರು ಪುತ್ರರು ಸಹಿತ ಅನೇಕ ಬಂಧುಮಿತ್ರರನ್ನು ಅಗಲಿದ್ದಾರೆ.