ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಅಶ್ರಫ್ ಮುನಿಯೂರ ಅಧ್ಯಕ್ಷತೆ ವಹಿಸಿದ್ದರು. ನವಾಗತ ಮಕ್ಕಳನ್ನು ಮೆರವಣಿಗೆ ಮೂಲಕ ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಕಲಾ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು, ಶಾಲಾ ಅಧ್ಯಾಪಕ ಜ್ಯೋತ್ಸ್ನಾ, ವಿದ್ಯಾ ಟೀಚರ್, ತಂಗಮಣಿ, ಕೃಷ್ಣಕುಮಾರ್ ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕಿ ಪ್ರಭಾವತಿ ಕೆದಿಲಾಯ ಪುಂಡೂರು ಸ್ವಾಗತಿಸಿ, ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು, ದಿವ್ಯ ಟೀಚರ್ ಪ್ರಾರ್ಥನೆ ಹಾಡಿದರು.