ನವದೆಹಲಿ: ಚುನಾವಣಾ ಬಾಂಡ್‌ಗಳು ಮತ್ತು ಹಣಕಾಸು ಕಾಯ್ದೆಯ ತಿದ್ದುಪಡಿಯ ಬಗ್ಗೆ ತನ್ನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಆರ್‌ಟಿಐ ಕಾರ್ಯಕರ್ತನಿಗೆ ಒದಗಿಸಿರುವುದಾಗಿ ಘೋಷಿಸಿ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ (ಇ.ಸಿ) ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸೂಚನೆ ನೀಡಿದೆ.
ನವದೆಹಲಿ: ಚುನಾವಣಾ ಬಾಂಡ್‌ಗಳು ಮತ್ತು ಹಣಕಾಸು ಕಾಯ್ದೆಯ ತಿದ್ದುಪಡಿಯ ಬಗ್ಗೆ ತನ್ನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಆರ್‌ಟಿಐ ಕಾರ್ಯಕರ್ತನಿಗೆ ಒದಗಿಸಿರುವುದಾಗಿ ಘೋಷಿಸಿ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ (ಇ.ಸಿ) ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸೂಚನೆ ನೀಡಿದೆ.
ಪಾರದರ್ಶಕತೆಯ ಕಾನೂನಿನಡಿಯಲ್ಲಿ ಬಹಿರಂಗಪಡಿಸಬಹುದಾದ ಯಾವುದೇ ಹೆಚ್ಚಿನ ಮಾಹಿತಿಯನ್ನು ತಡೆಹಿಡಿದಿಲ್ಲವೆಂದು ನ್ಯಾಯಾಂಗವಲ್ಲದ ಸ್ಟ್ಯಾಂಪ್ ಪೇಪರ್‌ನಲ್ಲಿ ಇ.ಸಿ ಸ್ಪಷ್ಟಪಡಿಸಬೇಕು ಎಂದು ಸಿಐಸಿ ಹೇಳಿದೆ.
'ಪ್ರತಿವಾದಿಯು ಈ ಆದೇಶ ಸ್ವೀಕರಿಸಿದ ಮೂರು ವಾರಗಳೊಳಗೆ ಅಂದರೆ, ಜುಲೈ 15ರೊಳಗೆ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಬೇಕು. ಈ ನಿರ್ದೇಶನ ಪಾಲಿಸದಿದ್ದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಮುಖ್ಯ ಮಾಹಿತಿ ಆಯುಕ್ತ ವೈ.ಕೆ. ಸಿನ್ಹಾ ಎಚ್ಚರಿಕೆ ನೀಡಿದ್ದಾರೆ.
ನೌಕಾಪಡೆಯ ನಿವೃತ್ತ ಮುಖ್ಯ ಕಮಾಂಡರ್ ಲೋಕೇಶ್ ಬಾತ್ರಾ ಅವರು, 2017ರ ಹಣಕಾಸು ಕಾಯ್ದೆಯ ತಿದ್ದುಪಡಿಯ ನಂತರ ಚುನಾವಣಾ ಬಾಂಡ್‌ಗಳ ಪರಿಚಯಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಸೂಕ್ತ ಮಾಹಿತಿ ಸಿಗಲಿಲ್ಲವೆಂದು ಅವರು ಸಿಐಸಿ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ವೇಳೆ, ಕೇಂದ್ರ ಮಾಹಿತಿ ಆಯೋಗದ ಮುಂದೆ 'ಚುನಾವಣಾ ಆಯೋಗವು ಒದಗಿಸಿದ ದಾಖಲೆಗಳು ಪ್ರತಿಕ್ರಿಯೆಯಾಗಿ ಒದಗಿಸಲಾದ ಫೈಲ್‌ಗೆ 'ಲಿಂಕ್ ಫೈಲ್' ಇದ್ದಂತೆ ತೋರುತ್ತಿದೆ. ಇಸಿಐ ಟಿಪ್ಪಣಿ ಹಾಳೆ ಮತ್ತು ಪತ್ರವ್ಯವಹಾರದೊಂದಿಗೆ ತನ್ನ ಪ್ರತಿಕ್ರಿಯೆ ಒದಗಿಸಿದೆ' ಎಂದು ಬಾತ್ರಾ ವಾದಿಸಿದರು.
ಈ ವಾದ ನಿರಾಕರಿಸಿದ ಚುನಾವಣಾ ಆಯೋಗವು, 'ಬಾತ್ರಾ ಅವರು ಕೇಳಿದ, ನಮ್ಮಲ್ಲಿ ಲಭ್ಯವಿರುವ ಎಲ್ಲ ದಾಖಲೆಗಳನ್ನು ಈಗಾಗಲೇ ಅವರಿಗೆ ಒದಗಿಸಲಾಗಿದೆ' ಎಂದು ವಾದಿಸಿತು.
ವಾದ-ಪ್ರತಿವಾದ ಆಲಿಸಿದ ಮುಖ್ಯ ಮಾಹಿತಿ ಆಯುಕ್ತರು, 'ನ್ಯಾಯಾಂಗಯೇತರ ಸ್ಟ್ಯಾಂಪ್ ಪೇಪರ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕು. ಅಧಿಕೃತ ದಾಖಲೆಗಳಲ್ಲಿ ಅಸ್ತಿತ್ವದಲ್ಲಿರುವ ಲಿಂಕ್ ಮಾಡಲಾದ ಫೈಲ್/ಭಾಗ ಫೈಲ್ ಅಥವಾ ಸಂಬಂಧಿತ ವಿಷಯದ ಹೊಸ ಫೈಲ್ ಮಾಹಿತಿಯನ್ನು ಆರ್‌ಟಿಐ ಕಾಯಿದೆ ಅಡಿಯಲ್ಲಿ ಒದಗಿಸಬೇಕು' ಎಂದು ನಿರ್ದೇಶನ ನೀಡಿದರು.