ಕಾಸರಗೋಡು: ಅಂತಾರಾಷ್ಟ್ರೀಯ ಸೈಕಲ್ ದಿನಾಚರಣೆ ಅಂಗವಾಗಿ ಕಾಸರಗೋಡು ನಗರ ಪೊಲೀಸ್ ಠಾಣೆಯ ಚೈಲ್ಡ್ ಫ್ರೆಂಡ್ಲಿ ಪೆÇೀಲೀಸರ ಆಶ್ರಯದಲ್ಲಿ ಸೈಕಲ್ ರ್ಯಾಲಿ ಶುಕ್ರವಾರ ನಡೆಯಿತು. ಕಾಸರಗೋಡು ಬಿ.ಇ.ಎಂ ಹೈಯರ್ ಸೆಕೆಂಡರಿ ಶಾಲೆ ವಠಾರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಸರಗೋಡು ನಗರ ಪೊಲೀಸ್ ಸರ್ಕಳ್ ಇನ್ಸ್‍ಪೆಕ್ಟರ್ ಪಿ. ಅಜಿತ್ ಕುಮಾರ್ ಫ್ಲಾಗ್ ಆಫ್ ಮಾಡಿ ರ್ಯಾಲಿಗೆ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ವಿನೀತ್ ವಿನ್ಸೆಂಟ್ ಅಧ್ಯಕ್ಷ ತೆ ವಹಿಸಿದ್ದರು. ನಗರಠಾಣಾ ಎಸ್.ಐ ಇ. ಅಶೋಕನ್, ಎ. ಎಂ. ರಂಜಿತ್, ಶಾಲಾ ಪಿ ಟಿ ಎ ಅಧ್ಯಕ್ಷ ವೆಂಕಟ್ರಮಣ ಹೊಳ್ಳ ಮಹಿಳಾ ಪೆÇಲೀಸ್ ಮುಂತಾದವರು ಉಪಸ್ಥಿತರಿದ್ದರು.