ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಗ್ರಾ.ಪಂ. ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್ ಅಧ್ಯಕ್ಷತೆವಹಿಸಿದ್ದರು. ಪಂ. ಸದಸ್ಯರಾದ ಉಷಾ ಕುಮಾರಿ,ಮಹೇಶ್ ಭಟ್,ಮಾಜಿ ಸದಸ್ಯ ಹನೀಫ್ ನಡುಬೈಲ್, ಉದ್ಯೋಗ ಖಾತರಿ ಯೋಜನೆಯ ನವಾಸ್, ಪ್ರಮೋದ್ ಮೊದಲಾದವರು ಭಾಗವಹಿಸಿದರು.