HEALTH TIPS

ಸಚಿವೆ ವೀಣಾ ಜಾರ್ಜ್​ ಹೆಸರಲ್ಲಿ ಅಶ್ಲೀಲ ವಿಡಿಯೋ ಮಾಡಲು ಮುಂದಾದ ಕ್ರೈಂ ನಂದಕುಮಾರ್​ ಮುಖವಾಡ ಬಯಲು

 ಕೊಚ್ಚಿ: ಕ್ರೈಂ ನಂದಕುಮಾರ್​ ಎಂದೇ ಹೆಸರಾಗಿರುವ ಪತ್ರಕರ್ತನ ವಿರುದ್ಧ ಸಹೋದ್ಯೋಗಿಯೊಬ್ಬಳು ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಹೆಸರಲ್ಲಿ ನಕಲಿ ಅಶ್ಲೀಲ ವಿಡಿಯೋ ಮಾಡಲು ಬಂಧಿತ ಆರೋಪಿ ಸಂಚು ರೂಪಿಸಿದ್ದ ಎನ್ನಲಾಗಿದೆ.

ಕ್ರೈಂ ಮ್ಯಾಗಜಿನ್​ ಮತ್ತು ಯೂಟ್ಯೂಬ್​ ಚಾನೆಲ್​ ಮೂಲಕ ಕ್ರೈಂ ನಂದಕುಮಾರ್​ ಎಂದೇ ಖ್ಯಾತಿ ಗಳಿಸಿದ್ದ. ಸಾಕಷ್ಟು ವಿವಾದಗಳಿಂದ ಈಗಾಗಲೇ ಹಲವು ಬಾರಿ ನಂದಕುಮಾರ್​ ಸುದ್ದಿಯಾಗಿದ್ದ. ಕ್ರೈಂ ನ್ಯೂಸ್​ಗೆ ಸಂಬಂಧಿಸಿದ ಈತನ ಲೇಖನಗಳು ಭಾರೀ ಸಂಚಲನ ಮೂಡಿಸುತ್ತಿದ್ದವು. ಅಲ್ಲದೆ, ತನಿಖಾ ವರದಿಗಾರಿಕೆ ಮೂಲಕ ಮುಜುಗರ ಉಂಟು ಮಾಡುವ ವಿಷಯಗಳನ್ನು ಪ್ರಸ್ತುತ ಪಡಿಸುತ್ತಿದ್ದ. ಕಲೂರ್​ನಲ್ಲಿ ಸಹೋದ್ಯೋಗಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಆರೋಪದ ಮೇಲೆ ಇತ್ತಿಚೆಗಷ್ಟೇ ನಂದಕುಮಾರ್​ನನ್ನು ಬಂಧಿಸಲಾಗಿದೆ.

ಕ್ರೈಂ ಮ್ಯಾಗಜೀನ್‌ನ ಪ್ರಧಾನ ಸಂಪಾದಕರಾಗಿರುವ ನಂದಕುಮಾರ್​, ತನ್ನ ಸಹೋದ್ಯೋಗಿಯ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ನೀಲಿ ಚಿತ್ರದಲ್ಲಿ ನಟಿಸಿದರೆ ಹಣ ಕೊಡುವುದಾಗಿಯೂ ಬಲವಂತ ಮಾಡಿದ್ದ ಎಂದು ಸಂತ್ರಸ್ತೆ ದೂರಿದ್ದಾಳೆ. ನೋಡಲು ಸ್ವಲ್ಪ ವೀಣಾ ಜಾರ್ಜ್​ ರೀತಿ ಇರುವುದರಿಂದ ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ಬಲವಂತ ಮಾಡಿದ. ಸಚಿವೆಯ ಹೆಸರಲ್ಲಿ ನಕಲಿ ನೀಲಿ ಸಿನಿಮಾ ಮಾಡಿ ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶವನ್ನು ನಂದಕುಮಾರ್​ ಹೊಂದಿದ್ದ. ಆತನ ಕೃತ್ಯಕ್ಕೆ ಒಪ್ಪದಿದ್ದಕ್ಕೆ ತುಂಬಾ ಬೆದರಿಕೆ ಹಾಕಿ ಹಿಂಸೆ ಕೊಟ್ಟಿದ್ದಾನೆಂದು ಸಂತ್ರಸ್ತೆ ಮಾಧ್ಯಮಗಳ ಮುಂದೆ ಬಾಯ್ಬಿಟ್ಟಿದ್ದಾಳೆ.

ನೀಲಿ ಸಿನಿಮಾದಲ್ಲಿ ನಟಿಸದೇ ಹೋದರೆ, ಎಡಿಟ್​ ಮಾಡಿರುವ ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ. ಅಲ್ಲದೆ, ಜಾತಿಯ ಹೆಸರಲ್ಲಿ ನಿಂದಿಸಲು ಶುರು ಮಾಡಿದ. ತಮ್ಮ ಬಳಿ ಸಚಿವರ ಅಶ್ಲೀಲ ವಿಡಿಯೋಗಳಿವೆ ಎಂದು ಈ ಹಿಂದೆಯೇ ಲೇಖನವೊಂದನ್ನು ಪ್ರಕಟಿಸಿದ್ದ. ಸಾಕಷ್ಟು ಹಿಂಸೆ ನೀಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದು, ಮಾಧ್ಯಮಗಳಿಗೂ ತಿಳಿಸಿದ್ದಾರೆ.

ಸಂತ್ರಸ್ತೆ ದೂರು ನೀಡಿದ ಬೆನ್ನಲ್ಲೇ ಕ್ರೈಂ ಮ್ಯಾಗಜಿನ್​ನಲ್ಲಿ ಕೆಲಸ ಮಾಡುವ ಇನ್ನಿತರ ಸಹೋದ್ಯೋಗಿಗಳು ಕೂಡ ನಂದಕುಮಾರ್​ ವಿರುದ್ಧ ಕಿರುಕುಳ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂದಿದ್ದಾರೆ. ನಂದಕುಮಾರ್​ ವಿರುದ್ಧ ಎಸ್​ಸಿ, ಎಸ್​ಟಿ ಕಾಯ್ದೆ ಮತ್ತು ಐಟಿ ಕಾಯ್ದೆ ಅಡಿ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries