ಸಮರಸ ಚಿತ್ರಸುದ್ದಿ: ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯ ಭಾಗವಾಗಿ ಅಖಿಲ ಕೇರಳ ಛಾಯಾಗ್ರಾಹಕರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ನೂತನ ಜಿಲ್ಲಾ ಸಮಿತಿ ಕಛೇರಿಯ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷ ಎನ್.ಎ.ಭರತನ್ ಅವರು ಗಿಡ ನೆಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖಂಡರು, ಸಮಿತಿ ಸದಸ್ಯರು, ಪ್ರಾದೇಶಿಕ ಪದಾಧಿಕಾರಿಗಳು ಹಾಗೂ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.