ಕಾಸರಗೋಡು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಾಕ್ಷರತಾ ಸಮಿತಿ ಸಭೆ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿ 30 ಮನೆಗಳಿಗೆ ಇಂದು ಡಿಜಿಟಲ್ ಸಾಕ್ಷರತಾ ತರಗತಿಯಂತೆ ಎಲ್ಲೆಡೆ ಆಯೋಜಿಸಲಾಗುವುದು. ಪ್ರತಿಯೊಂದು ವಾರ್ಡ್‍ಗಳಿಗೂ ಸಂಪನ್ಮೂಲ ವ್ಯಕ್ತಿಯನ್ನು ನಿಯೋಜಿಸಲಾಗುವುದು. 16000 ತರಗತಿಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಡಿಜಿಟಲ್ ಸಾಕ್ಷರತಾ ಯೋಜನೆಯು ಮೂರು ಹಂತದ ಪಂಚಾಯತಿ ಮತ್ತು ನಗರಸಭೆಗಳ ಸಮಗ್ರ ಯೋಜನೆಯಾಗಿದೆ. ಬ್ಯಾಂಕ್ ಆನ್‍ಲೈನ್ ಪಾವತಿಗಳು, ಮೊಬೈಲ್ ರೀಚಾರ್ಜ್, ವಿದ್ಯುತ್ ಬಿಲ್ ಮತ್ತು ಎಲ್‍ಪಿಜಿ ಗ್ಯಾಸ್ ಬುಕಿಂಗ್‍ನಂತಹ ಪ್ರಾಯೋಗಿಕ ಜೀವನದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಒದಗಿಸುವುದು ಯೋಜನೆಯಾಗಿದೆ.
ಹತ್ತನೇ ತರಗತಿ, ಹೈಯರ್ ಸೆಕೆಂಡರಿ ಸಮಾನತೆ ಶಿಕ್ಷಕರ ನೇಮಕಾತಿಗೆ ಉಪಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಇ.ಕೆ.ನಾಯನಾರ್ ಗ್ರಂಥಾಲಯವನ್ನು ಜಿಲ್ಲಾ ಸಾಕ್ಷರತಾ ಮಿಷನ್ ಸ್ವಾಧೀನಪಡಿಸಿಕೊಳ್ಳುವ ಅಂಗವಾಗಿ ಜೂ.20ರಂದು ಕಾರ್ಯಕ್ರಮ ನಡೆಯಲಿದೆ. ಸೆ.8ರಂದು ಜಿಲ್ಲಾ ಮಟ್ಟದ ಸಾಕ್ಷರತಾ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ.
ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ವರದಿ ಮಂಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಎನ್.ಸರಿತಾ, ಶಿನೋಜ್ ಚಾಕೋ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಕೆ.ಪ್ರದೀಪನ್, ಡಯಟ್ ಪ್ರಾಂಶುಪಾಲ ಡಾ.ರಘುರಾಮ ಭಟ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಎಸ್. ಮಧುಸೂದನನ್, ಕೆ.ವಿ.ರಾಘವನ್ ಮಾಸ್ತರ್, ಕೆ.ವಿ.ವಿಜಯನ್, ಕಾಸರಗೋಡು ಸರ್ಕಾರಿ ಕಾಲೇಜಿನ ಡಾ.ಎಲ್. ರಾಧಾಕೃಷ್ಣನ್, ಕುಟುಂಬಶ್ರೀ ಪ್ರತಿನಿಧಿ ಶೇಬಿ ಇ, ಶಿಕ್ಷಣ ಇಲಾಖೆ ಆಡಳಿತ ಸಹಾಯಕ ಸುರೇಂದ್ರನ್ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.