ನವದೆಹಲಿ: ಪಂಜಾಬ್ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಗುರುವಾರ ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.
ಗುಪ್ತಾ ಪಂಜಾಬ್ ಕೇಡರ್‌ನ 1987-ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕೇಂದ್ರ ಸಂಪುಟ ನೇಮಕಾತಿ ಸಮಿತಿಯು ಗುಪ್ತಾ ಅವರ ನಿವೃತ್ತಿಯ ದಿನಾಂಕವಾದ ಮಾರ್ಚ್ 31, 2024 ರವರೆಗೆ ಎನ್ಐಎ ಮಹಾ ನಿರ್ದೇಶಕಾರಿ ನೇಮಕ ಮಾಡಲು ಅನುಮೋದಿಸಿದೆ.
ಮತ್ತೊಂದು ಆದೇಶದಲ್ಲಿ, ಸ್ವಾಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ(ಆಂತರಿಕ ಭದ್ರತೆ) ಆಗಿ ನೇಮಿಸಲಾಗಿದೆ. ದಾಸ್, ಛತ್ತೀಸ್‌ಗಢ ಕೇಡರ್‌ನ 1987-ಬ್ಯಾಚ್‌ನ ಐಪಿಎಸ್ ಅಧಿಕಾರಿ, ಪ್ರಸ್ತುತ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿದ್ದಾರೆ.
ದಾಸ್ ಅವರನ್ನು ನವೆಂಬರ್ 30, 2024 ರವರೆಗೆ ನೇಮಿಸಲಾಗಿದೆ, ಅದು ಅವರ ನಿವೃತ್ತಿಯ ದಿನಾಂಕವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.