ನವದೆಹಲಿ: ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಗೃಹ ಬಳಕೆಯ ಎಲ್‍ಜಿಪಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.
ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ. ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಮಾತನಾಡಿ, ಕೋವಿಡ್ ಶುರುವಾದ ದಿನದಿಂದ ಎಲ್‍ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಕೂಡ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ಸಬ್ಸಿಡಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಹಕರು ತಮ್ಮ ಎಲ್‌ಪಿಜಿ ಸಿಲಿಂಡರ್ ಗೆ ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಆರಂಭಿಕ ದಿನಗಳಿಂದಲೂ ಎಲ್‌ಪಿಜಿ ಗ್ರಾಹಕರಿಗೆ ಯಾವುದೇ ಸಬ್ಸಿಡಿಯನ್ನು ನೀಡಲಾಗಿಲ್ಲ.
ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದಿರುವ 9 ಕೋಟಿ ಬಡ ಮಹಿಳೆಯರು ಮತ್ತು ಇತರ ಫಲಾನುಭವಿಗಳಿಗೆ ಕೇಂದ್ರವು ಅಡುಗೆ ಅನಿಲ ಸಬ್ಸಿಡಿಯನ್ನು ನಿರ್ಬಂಧಿಸಿದೆ. ಜೂನ್ 2020 ರಿಂದ ಅಡುಗೆ ಅನಿಲದ ಮೇಲೆ ಯಾವುದೇ ಸಬ್ಸಿಡಿಯನ್ನು ಪಾವತಿಸಲಾಗಿಲ್ಲ.
ಮಾರ್ಚ್ 21 ರಂದು ಹಣಕಾಸು ಸಚಿವರು ಘೋಷಿಸಿದ ಸಬ್ಸಿಡಿಯನ್ನು ಮಾತ್ರ ನೀಡಲಾಗಿದೆ. ಸದ್ಯ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆ 1006 ರೂಪಾಯಿ ಇದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿ ಸಿಗಲಿದೆ.