ಕಣ್ಣೂರು : ಕಣ್ಣೂರು ಸಿಪಿಎಂ ಕಚೇರಿಯ ಮೇಲೆ ದಾಳಿ ನಡೆದಿದೆ.ಕಕ್ಕಾಡ್ ಲೋಕಲ್ ಕಮಿಟಿ ಕಚೇರಿಯ ಕಿಟಕಿಗಳಿಗೆ ಹಾನಿಗೊಳಿಸಲಾಗಿದೆ.ಮುಸ್ಲಿಂ ಲೀಗ್ ಪ್ರಭಾವವಿರುವ ವಲಯದಲ್ಲಿ ಕಕ್ಕಾಡ್ ಮತ್ತು ಸಮ್ಮೇಳನದ ಅರಿವಿನಿಂದ ದಾಳಿ ನಡೆದಿದೆ ಎಂದು ಸಿಪಿಎಂ ಮುಖಂಡರು ಆರೋಪಿಸಿದ್ದಾರೆ. ಆಕ್ರಮಣ ಸಂಭವಿಸಿದ ಮಾಹಿತಿ ತಿಳಿದ ಮುಖಂಡರು ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ವಿ ಜಯರಾಜನ್ ಮತ್ತು ಸ್ಥಳೀಯ ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ. ಯಾರಿಗೋಸ್ಕರ ನಡೆದ ದಾಳಿಯೆಂಬುದು ಜನರಿಗೆ ಅರಿವಿದೆ ಎಂದು ಮ ಎಂ.ವಿ. ಜಯರಾಜನ್ ಪ್ರತಿಕ್ರಿಯಿಸಿದರು.
ಕೋಝಿಕೋಡ್ ಪೇರಾಂಪ್ರ ವಾಳ್ಯಕೋಟ್ ಸಿಪಿಎಂ ಪಕ್ಷದ ಕಚೇರಿಯ ಮೇಲೆ ದಾಳಿ ನಡೆದಿತ್ತು.ವಾಳ್ಯಕೋಟ್ ಟೌನ್ ಬ್ರಾಂಚ್ ಆಫೀಸ್ ನಲ್ಲಿ ನಿನ್ನೆ ರಾತ್ರಿ ಬೆಂಕಿ ಹಚ್ಚಲಾಗಿತ್ತು .ಆಫೀಸ್ ನ ಇತರ ಫೈಲ್ ಗಳು ಬೆಂಕಿಗೆ ಆಹುತಿಯಾಗಿದೆ.
ಚಿನ್ನಾಭರಣ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧದ ಪ್ರತಿಭಟನೆಯೊಂದಿಗೆ ಸಿಪಿಎಂ, ಡಿವೈಎಫ್ ಐ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿದ್ದರು. ಕಳೆದ ದಿನ ವಿಮಾನದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ಕೆಪಿಸಿಸಿ ಕೇಂದ್ರ ಕಚೇರಿಗೆ ದಾಳಿ ನಡೆದಿತ್ತು. ಕೋಝಿಕೋಡ್ ಜಿಲ್ಲೆಯಲ್ಲಿಯೂ ಕಳೆದ ದಿನಗಳಲ್ಲಿ ಹಲವು ಬಾರಿ ವ್ಯಾಪಕವಾದ ಅಕ್ರಮಗಳು ನಡೆದಿವೆ. ಇದರ ಮುಂದುವರಿಕೆ ವಾಳ್ಯಕೋಟ್ ಹಾಗೂ ಕಣ್ಣೂರಿನ ಘಟನೆಯೆಂದು ನಿರ್ಣಯಿಸಲಾಗಿದೆ.