HEALTH TIPS

ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನೇಮಕ ವಿವಾದ: ಕನ್ನಡ ಗಡಿ ಅಭಿವೃದ್ದಿ ಪ್ರಾಧಿಕಾರದಿಂದ ಪತ್ರ

            ಕುಂಬಳೆ: ಭಾಷಾ ಅಲ್ಪ ಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಕನ್ನಡಿಗರ ಹಿತ ರಕ್ಷಣೆಗೆ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅ|ಭಿವೃದ್ದಿ ಪ್ರಾಧಿಕಾರ ಸದಾ ಜೊತೆಯಲ್ಲಿದ್ದು ಕನ್ನಡಿಗರ ಹಿತ ರಕ್ಷಣೆಗೆ ಕಟಿಬದ್ದ ಎಂದು ಪ್ರಾಧಿಕಾರದ ಅ|ಧ್ಯಕ್ಷ ಡಾ. ಸಿ.ಸೋಮಶೇಖರ ತಿಳಿಸಿದ್ದಾರೆ.

          ಈಗಾಗಲೇ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ ಇದೇ ಮೊದಲ ಬಾರಿಗೆ ಕನ್ನಡಿಗರ ಹೊರತಾಗಿ ಮಲೆಯಾಳಿಯಾದ ಸುರೇಶ್ ಕುಮಾರ್ ಎಂ. ಅವರನ್ನು ನೇಮಕಮಾಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ  ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಆ.ಸಿ.ಸೋಮಶೇಖರ್ ಅವರು ಕೇರಳದ ಮುಖ್ಯಮಂತ್ರಿ, ರಾಜ್ಯ ಶಿಕ್ಷಣ ಉಪನಿರ್ದೇಶಕರು ಹಾಗೂ ಕಾಸರಗೋಡು ಜಿಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕಾನೂನು ಸಂರಕ್ಷಿಸಲು ತಿಳಿಸಿದ್ದಾರೆ.   

           ಏನಿದು ಸಮಸ್ಯೆ:  

          ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗ ಶೈಕ್ಷಣಿಕ ಜಿಲ್ಲಾ ಅಧಿಕಾರಿಯನ್ನು ವರ್ಗಾವಣೆಗೊಳಿಸಿ, ಸರ್ಕಾರ ಮಲಯಾಳಿ ಅಧಿಕಾರಿಯನ್ನು ನೇಮಕಮಾಡುವ ಮೂಲಕ ಕನ್ನಡಿಗರಿಗೆ ಮತ್ತೊಂದು ಪ್ರಹಾರ ನೀಡಿದೆ. ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ವ್ಯಾಪ್ತಿಯನ್ನು ಒಳಗೊಂಡ ಕಾಸರಗೋಡು ಶೈಕ್ಷಣಿಕ ಜಿಲ್ಲೆಗೆ ಸಂವಿಧಾನಾತ್ಮಕವಾಗಿ ಕನ್ನಡಿಗ ಅಧಿಕಾರಿಯನ್ನೇ ನೇಮಿಸಬೇಕು ಎಂಬ ಆದೇಶ ಉಲ್ಲಂಘಿಸಿ ಇಲ್ಲಿ ಮಲಯಾಳಿ ಅಧಿಕಾರಿಯನ್ನು ನೇಮಕಗೊಳಿಸಲಾಗಿದೆ. ಈಗಾಗಲೇ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಶಿಕ್ಷಕರನ್ನು ನೇಮಕಗೊಳಿಸಿ ಆದೇಶ ಹೊರಡಿಸಿರುವ ಬೆನ್ನಿಗೆ ಜಿಲ್ಲಾ ಶಿಕ್ಷಣಾಧಿಕಾರಿ ಸ್ಥಾನಕ್ಕೂ ಮಲಯಾಳಿ ಅಧಿಕಾರಿಯನ್ನು ನೇಮಿಸಿ ಆದೇಶಿಸುವ ಮೂಲಕ ಕಾಸರಗೋಡಿನಲ್ಲಿ ಕನ್ನಡವನ್ನು ದಮನಿಸುವ ಕೆಲಸವನ್ನು ಖುದ್ದು ಸರ್ಕಾರವೇ ನಡೆಸಲು ಮುಂದಾಘಿರುವುದಾಗಿ ಕನ್ನಡಪರ ಸಂಸ್ಥೆಗಳು ತಿಳಿಸಿದೆ. 

           ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶೀಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದ ಸರ್ಕಾರ, ಪ್ರಸಕ್ತ ಸಂವಿಧಾನಾತ್ಮಕವಾಗಿ ಕನ್ನಡಿಗರು ಇರಬೇಕಾದ ಅಧಿಕಾರಿಯ ಹುದ್ದೆಯನ್ನೂ ಕಸಿದುಕೊಳ್ಳಲು ಮುಂದಾಗಿದೆ. ಈಗಾಗಲೇ ಕಂದಾಯ, ಸರ್ಕಾರಿ ಆಸ್ಪತ್ರೆ, ತಾಲೂಕು ಕಚೇರಿ, ಗ್ರಾಮಾಧಿಕಾರಿ ಕಚೇರಿ, ಕೃಷಿ ಇಲಾಖೆ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಮಲಯಾಳಿ ನೌಕರರನ್ನು ನೇಮಿಸುವ ಮೂಲಕ ಬಲವಂತವಾಗಿ ಮಲಯಾಳ ಹೇರುವ ಕೆಲಸವನ್ನು ಪರೋಕ್ಷವಾಗಿ ನಡೆಸಲಾಗುತ್ತಿದೆ. ಈ ಮಧ್ಯೆ ಕನ್ನಡಿಗರಿಗಾಗಿ ಮೀಸಲಿರಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೂ ಮಲಯಾಳಿ ಅಧಿಕಾರಿಯನ್ನು ನೇಮಿಸುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದೆ. ಕಾಸರಗೋಡಿನಲ್ಲಿ ಕನ್ನಡದ ದಮನಕ್ಕೆ ಹಲವು ಸಮಯದಿಂದ ಶ್ರಮ ನಡೆಯುತ್ತಿದೆ. ಕನ್ನಡಿಗರಿಗೆ ಸಂವಿಧಾನಾತ್ಮಕವಾಗಿ ಲಭಿಸಬೇಕಾದ ಹಕ್ಕನ್ನು ಸರ್ಕಾರ ಕಸಿದುಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ತಿಳಿಸಿದ್ದಾರೆ.

            ಮಂಜೇಶ್ವರದಲ್ಲಿ ಬೇರೆಯೇ ಗುಮ್ಮ:

     ಈ ಮಧ್ಯೆ ಕೇರಳ ಆಡಳಿತ ಭಾಷಾ ಸಮಿತಿಯ ಮನವಿಯ ಮೇರೆಗೆ ಗಡಿ ತಾಲೂಕು ಮಂಜೇಶ್ವರದ ಬಹುತೇಕ ಕಡೆಗಳಲ್ಲಿ ಕಡ್ಡಾಯ ಮಲೆಯಾಳ ಕಲಿಕೆಗೆ ಕ್ರಮಗಳು ಆರಂಭಗೊಂಡಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಐದು ಶಾಲೆಗಳಿಗೆ ಒಬ್ಬ ಶಿಕ್ಷಕನಂತೆ ಮಲೆಯಾಳ ಕಲಿಸಲು ಈಗಾಗಲೇ ಆರಂಭಿಕ ಯತ್ನ ಸಾಗಿದೆ. ಆಸಕ್ತರು ಮಾತ್ರ ಕಲಿತರ ಸಾಕೆಂದು ಸರ್ಕಾರ ಹೇಳುತ್ತಿದ್ದರೂ ಅದರ ಹಿಂದೆ ನೀನು ಕಲಿಯದೆ ಎಲ್ಲಿ ಹೋಗುತ್ತಿ? ಎಂಬ ದಾಷ್ಟ್ರ್ರವೂ ಇದೆ. ಇದು ಮುಂದೆ ಸಂಪೂಣ್ ಮಲೆಯಾಳೀಕರಣಕ್ಕೆ ಹಾದಿ ಸುಗಮ ಮಾಡಿಕೊಡಲಿದೆ. ಮಂಜೇಶ್ವರ ತಾಲೂಕಿನಲ್ಲಿ ಒಂದೇ ಒಂದು ಮಲೆಯಾಳ ತರಗತಿ ಇಲ್ಲದ ಗ್ರಾಮ ಪಂಚಾಯತಿ ಎಂಬ ಹಿರಿಮೆ ಇರುವ ವರ್ಕಾಡಿ ಪಂಚಾಯತಿಯಲ್ಲಿಯೂ ಈ ಮೂಲಕ ಮಲೆಯಾಳ ಮಾಧ್ಯಮ ತರಗತಿ ಪ್ರವೇಶಗೊಳಿಸುವ ಗೌಪ್ಯ ಲಕ್ಷ್ಯವೂ ಈ ಮೂಲಕ ಸಾಕಾರಗೊಳಿಸುವ ಯತ್ನ ಇದರ ಹಿಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries