ಮಂಜೇಶ್ವರ: ಕೊಡ್ಲೊಮೊಗರು ಶ್ರೀವಾಣೀವಿಜಯ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ನಡೆಯಿತು. ಪ್ರಭಾರ ಮುಖ್ಯೋಪಾಧ್ಯಾಯ ಕೃಷ್ಣವೇಣಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಪ್ರಾಂಶುಪಾಲ ಚಂದ್ರಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಲಾಲುದ್ದೀನ್, ಉಪಾಧ್ಯಕ್ಷ ಹಮೀದ್ ಕಣಿಯೂರು ಶುಭಹಾರೈಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.