ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ, ಭೌತಶಾಸ್ತ್ರ ಮತ್ತು ವಾಣಿಜ್ಯ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ತೆರವಾಗಿದ್ದು, ನೇಮಕಾತಿಗಾಗಿ ವಿವಿಧ ದಿನಗಳಲ್ಲಿ ಸಂದರ್ಶನ ನಡೆಯಲಿದೆ. ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ, ನೆಟ್ ಅರ್ಹತೆ ಹೊಂದಿರಬೇಕು. ನೆಟ್ ಅರ್ಹತೆಯ ಅನುಪಸ್ಥಿತಿಯಲ್ಲಿ ಸ್ನಾತಕೋತ್ತರ ಪದವೀಧರರನ್ನು ಪರಿಗಣಿಸಲಾಗುತ್ತದೆ. ಜೂನ್ 15 ರಂದು ಪ್ರಾಣಿಶಾಸ್ತ್ರ, 16 ರಂದು ಭೌತಶಾಸ್ತ್ರ ಮತ್ತು 17 ರಂದು ವಾಣಿಜ್ಯಶಾಸ್ತ್ರವಿಭಾಗ ಉಪನ್ಯಾಸಕರ ಹುದ್ದೆಗೆ ಬೆಳಗ್ಗೆ 10.30 ಕ್ಕೆ ಪ್ರಾಂಶುಪಾಲರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆನೀ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 256027)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.