ನವದೆಹಲಿ:ಕಲುಷಿತ ಅನಿಲವನ್ನು ವಾತಾವರಣದಿಂದ ಕಡಿಮೆ ಗೊಳಿಸುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಸವಾಲಾಗುವ ಸಾಧ್ಯತೆ ಇದೆ. ಬಹುತೇಕ ವಾಹನಗಳ ಮಾಲಕರು ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದ 10,543 ವಾಹನ ಮಾಲಕರಲ್ಲಿ ಸುಮಾರು 57% ರಷ್ಟು ಮಂದಿ, ವಾಹನಗಳನ್ನು ಸೇವೆಯಿಂದ ತೆಗೆದುಹಾಕಬೇಕೆ ಅಥವಾ ಬೇಡವೇ ಎಂಬುದು ವಾಹನದ ವಯಸ್ಸನ್ನು ಆಧರಿಸುವುದರ ಬದಲು ಓಡೋ ಮೀಟರ್ ಮೇಲೆ ಅವಲಂಬಿಸುವುದು ಉತ್ತಮ ಎಂದು ಭಾವಿಸುತ್ತಾರೆ. 20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳು ರಸ್ತೆಯಲ್ಲಿ ಉಳಿಯಲು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸರ್ಕಾರ ಕಳೆದ ವರ್ಷ ಆದೇಶಿಸಿತ್ತು.
ಸರ್ವೇಯಲ್ಲಿ ಭಾಗವಹಿಸಿದ ಸುಮಾರು ಅರ್ಧಕ್ಕೂ ಹೆಚ್ಚಿನ ವಾಹನ ಮಾಲೀಕರು, ತಮ್ಮ ವಾಹನಗಳ ಸಂಖ್ಯೆಗಳನ್ನು ಕಡಿಮೆಗೊಳಿಸಲು ಯೋಚಿಸುತ್ತಿದ್ದಾರೆ. ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ಗೆ ದುಬಾರಿ ವೆಚ್ಚ ಪಾವತಿಸಿ ಹೆಚ್ಚಿನ ವಾಹನಗಳನ್ನು ಇರಿಸುವುದು ಹೊರೆಯಾಗಲಿದೆ ಎಂದು ಅವರು ನಂಬುತ್ತಾರೆಂದು NDTV ವರದಿ ಮಾಡಿದೆ. 15 ವರ್ಷ ಹಳೆಯದಾದ ವಾಹನಗಳ ನವೀಕರಣ ಪಡೆಯಲು ಈಗ ಹಿಂದಿಗಿಂತ 8 ಪಟ್ಟು ಹೆಚ್ಚು ವೆಚ್ಚ ಭರಿಸಬೇಕಾಗಿದೆ ಎಂದು ವರದಿ ಹೇಳಿದೆ.