ಗುವಾಹಟಿ: ಅಸ್ಸಾಂನ ಪ್ರವಾಹದಲ್ಲಿ ಸಿಲುಕಿರುವ ತಮ್ಮ ಕುಟುಂಬ ಸದಸ್ಯರು ಪಾಠಶಾಲೆಯ ತಮ್ಮ ಮನೆಯಲ್ಲಿ ಅಪಾಯಕಾರಿ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದ್ದರೂ ಕ್ಯಾಪ್ಟನ್ ರೂಪಮ್ ದಾಸ್ ಅವರು ಇತರರ ಸೇವೆ ಮೊದಲು ಎಂದು ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿದ್ದು, ನೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ್ದಾರೆ. ರೂಪಮ್ ದಾಸ್ ಅವರು ರಾಜ್ಯದ ಪಾಠಶಾಲಾ ಮೂಲದವರು.
"ಪ್ರವಾಹದಲ್ಲಿ ಸಿಲುಕಿದ್ದ ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ, ಕೆಲವು ಹೃದಯಸ್ಪರ್ಶಿ ಕಥೆಗಳು ಬೆಳಕಿಗೆ ಬಂದಿವೆ. ಅಂತಹ ಒಂದು ಕಥೆಯು ಕ್ಯಾಪ್ಟನ್ ರೂಪಮ್ ದಾಸ್ ಅವರದ್ದು. ಸೇನೆಯ ಪ್ರವಾಹ ರಕ್ಷಣಾ ಕಾರ್ಯಾಚರಣೆಯ ತೊಡಗಿರ ಅಧಿಕಾರಿ ಸ್ವಂತ ತನ್ನ ಕುಟುಂಬ ಸದಸ್ಯರು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಸಹ ಅವರ ರಕ್ಷಣೆಗೆ ತೆರಳದೆ ಇತರ ನೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ್ದಾರೆ" ಸೇನೆ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
"ದಾಸ್ ಅವರ ಕಾರ್ಯವು ಮಾನವೀಯತೆ ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆಗೆ ಅಸಾಧಾರಣ ಉದಾಹರಣೆಯಾಗಿದೆ. ಇಂತಹ ಸ್ಪೂರ್ತಿದಾಯಕ ಕಾರ್ಯಗಳು ಅಸಾಧಾರಣ ಮಾನವೀಯ ಮೌಲ್ಯಗಳು ಸೇನೆಯನ್ನು ಮತ್ತಷ್ಟು ಬಲಿಷ್ಠವಾಗಿಸುತ್ತಿದೆ" ಎಂದು ಸೇನೆ ಹೇಳಿದೆ.
ಸೇನಾ ನಾಲ್ಕು ದಿನಗಳ ಹಿಂದೆ ಅಸ್ಸಾಂ ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದು, ಏಳು ಜಿಲ್ಲೆಗಳಲ್ಲಿ ರೋಗಿಗಳು, ವೃದ್ಧರು ಮತ್ತು ಮಕ್ಕಳು ಸೇರಿದಂತೆ 4,500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಇನ್ನೂ ಪ್ರವಾಹದಿಂದಾಗಿ ಐವರು ಹಾಗೂ ಭೂಕುಸಿತದಿಂದ ಮೂವರು ಸೇರಿದಂತೆ ಭಾನುವಾರ ಎಂಟು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ರಾಜ್ಯದ 35 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ 37.17 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಪೀಡಿತರಾಗಿದ್ದಾರೆ.