ಮಂಜೇಶ್ವರ: ಜನಪರ ಕಾರ್ಯಕ್ರಮ ಗಳನ್ನು ನೀಡುತ್ತ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ನೀಡುತ್ತಿರುವ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಉದ್ದೇಶ ದಿಂದ ಬಿಜೆಪಿ ಹಮ್ಮಿಕೊಂಡಿ ರುವ ಮನೆ ಮನೆ ಸಂಪರ್ಕ ಅಭಿಯಾನ ಯಶಸ್ವಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಕರೆ ನೀಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮಿಯಪದವು ಪಕ್ಷದ ಕಚೇರಿಯಲ್ಲಿ ಜರಗಿದ ಸಭೆಯ ಅಧ್ಯಕ್ಷತೆ ಯನ್ನು ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ವಹಿಸಿದ್ದರು.
ಮುಖಂಡರಾದ ಹರಿಶ್ಚಂದ್ರ ಎಂ, ಯಾದವ ಬಡಾಜೆ,ಅಶಲತಾ ಪೇಲಪ್ಪಾಡಿ, ಶಂಕರನಾರಾಯಣ ಮುಂದಿಲ, ಕೆ ವಿ ಭಟ್, ಸರೋಜ ಬಲ್ಲಾಳ್, ರಕ್ಷನ್ ಅಡಕಳಕಟ್ಟೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. . ಸುಬ್ರಮಣ್ಯ ಭಟ್ ಪೈವಳಿಕೆ ಸ್ವಾಗತಿಸಿ, ಚಂದ್ರಹಾಸ ಪೂಜಾರಿ ಕಡಂಬಾರು ವಂದಿಸಿದರು.