HEALTH TIPS

'ಭಾರತದ ಸ್ನೇಹಿತರೇ. ಸತ್ಯದ ಪರವಾಗಿ ನಿಲ್ಲಿ. ಕಾನೂನು​ ಇರುವಾಗ ಛೇ. ಇಂಥವರಿಗೆ ತಲೆಬಾಗುವಿರಾ?'

 ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆಗೆ ಇಸ್ಲಾಮಿಕ್​ ದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಅಲ್ ಕೈದಾ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ಬೆದರಿಕೆ ಒಡ್ಡುತ್ತಿವೆ. ಭಾರತದಲ್ಲಿಯೂ ಈಕೆಯ ಹೇಳಿಕೆಗೆ ಹಲವೆಡೆ ಭಾರಿ ಪ್ರತಿಭಟನೆಗಳು ನಡೆದಿದ್ದು, ಬೆಳಗಾವಿಯಲ್ಲಿ ನೂಪುರ್​ ಅವರ ಪ್ರತಿಕೃತಿ ತಯಾರಿಸಿ ನೇಣಿಗೆ ಏರಿಸಲಾಗಿದೆ.

ಇವುಗಳ ನಡುವೆಯೇ ಮತ್ತೊಂದಿಷ್ಟು ಮಂದಿ ನೂಪುರ್​ ಅವರ ಬೆಂಬಲಕ್ಕೆ ನಿಂತಿದ್ದು, ಆಕೆ ಹೇಳಿದ್ದರಲ್ಲಿ ಯಾವುದೇ ಸುಳ್ಳು ಇಲ್ಲ, ಅವರು ಸತ್ಯವನ್ನೇ ನುಡಿದಿದ್ದಾರೆ ಎಂದು ಬೆಂಬಲಿಸಿದ್ದಾರೆ. ನಿನ್ನೆಯಷ್ಟೇ ನಟಿ ಕಂಗನಾ ರಣಾವತ್​ ಕೂಡ ನೂಪುರ್​ ಅವರ ಬೆಂಬಲಕ್ಕೆ ನಿಂತು ಟ್ವೀಟ್​ ಮಾಡಿದ್ದರು.


ನೂಪುರ್​ ಅವರ ಈ ಮಾತು ವಿದೇಶಗಳಲ್ಲಿಯೂ ಪ್ರತಿಧ್ವನಿಸುತ್ತಿರುವ ನಡುವೆಯೇ, ನೆದರ್‌ಲ್ಯಾಂಡ್ಸ್‌ನ ಬಲಪಂಥೀಯ ನಾಯಕ, ಸಂಸದ ಗೀರ್ಟ್ ವಿಲ್ಡರ್ಸ್ ಅವರು ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು, ನೂಪುರ್ ಶರ್ಮಾ ತಮ್ಮ ಮಾತಿನ ವೇಳೆ ಸತ್ಯವನ್ನೇ ಹೇಳಿದ್ದಾರೆ. ಅಲ್ ಖೈದಾದಂತಹ ಇಸ್ಲಾಮಿಕ್ ಉಗ್ರರು ಅನಾಗರಿಕತೆಯನ್ನು ಪ್ರತಿನಿಧಿಸುವುದರಿಂದ ಭಾರತ ಅದಕ್ಕೆ ತಲೆಬಾಗಬಾರದು. ಭಾರತದ ನನ್ನ ಸ್ನೇಹಿತರೇ, ಇಸ್ಲಾಮಿಕ್ ದೇಶಗಳಿಂದ ಹೆದರಬೇಡಿ. ಅವರದ್ದು ಎಲ್ಲಾ ಕಡೆ ಇದದ್ದೇ. ಸತ್ಯದ ಪರವಾಗಿರುವ ನೂಪುರ್ ಶರ್ಮಾ ಅವರನ್ನು ಸಮರ್ಥಿಸಿಕೊಳ್ಳಲು ಹೆಮ್ಮೆ ಪಡಿ ಮತ್ತು ಅಚಲವಾಗಿರಿ. ಸ್ವಾತಂತ್ರ್ಯಕ್ಕಾಗಿ ನಿಲ್ಲಿ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ನೂಪುರ್​ ಅವರು ಹೇಳಿರುವುದಕ್ಕೆ ಯಾರದ್ದಾದರೂ ಆಕ್ಷೇಪಗಳಿದ್ದರೆ ಅದನ್ನು ಕೋರ್ಟ್​ಗಳಲ್ಲಿ ಪ್ರಶ್ನಿಸಲಿ, ಕೋರ್ಟ್​ಗಳು, ಕಾನೂನು ಇರುವಾಗ ಬೆದರಿಕೆ ಮೂಲಕ ಹೀಗೆ ಮಾಡುವುದು ಅನಾಗರಿಕ ಲಕ್ಷಣವಾಗಿದೆ. ಇಸ್ಲಾಮಿಕ್​ ದೇಶಗಳಲ್ಲಿ ಕಾನೂನು, ನಿಯಮಕ್ಕೆ ಅವಕಾಶವೇ ಇಲ್ಲ. ಆದರೆ ಭಾರತದಲ್ಲಿ ಎಲ್ಲವೂ ಇದೆ. ಹಾಗಿರುವಾಗ ಅಂಥ ಹೇಡಿಗಳಿಗೆ ಬೆಂಬಲಿಸುವುದು ಏಕೆ? ಇಡೀ ಭಾರತ ದೇಶ ನೂಪುರ್ ಶರ್ಮಾ ಪರವಾಗಿ ನಿಲ್ಲಬೇಕು ಮತ್ತು ಅವರಿಗೆ ಬೆಂಬಲ ನೀಡಬೇಕು ಎಂದಿದ್ದಾರೆ.

ತಮಗೂ ಈ ರೀತಿಯ ಬೆದರಿಕೆ ಬಂದಿರುವ ಬಗ್ಗೆ ಟ್ವೀಟ್​ನಲ್ಲಿ ಉಲ್ಲೇಖಿಸಿರುವ ಅವರು, ಕೆಲವು ವರ್ಷಗಳ ಹಿಂದೆ ಅಲ್ ಖೈದಾ ಮತ್ತು ತಾಲಿಬಾನ್ ನನ್ನನ್ನು ತಮ್ಮ ಹಿಟ್‌ಲಿಸ್ಟ್‌ನಲ್ಲಿ ಇರಿಸಿದ್ದವು. ಇದೀಗ ನೂಪುರ್​ ಶರ್ಮಾ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ನಾನು ಅವರಿಗೆ ಹೇಳುವುದು ಇಷ್ಟೇ. ನರಕಕ್ಕೆ ಹೋಗಿ, ನಿಮಗೆ ನಾವು ಹೆದರುವುದಿಲ್ಲ. ಸತ್ಯದ ಪರವಾಗಿ ನಾನಿದ್ದೇನೆ ಎಂದಿದ್ದಾರೆ.

ಇಸ್ಲಾಂ ವಿರುದ್ಧ ಟೀಕೆಗಳಿಂದ ಹೆಚ್ಚು ಪರಿಚಿತರಾಗಿರುವ ಗೀರ್ಟ್ ವಿಲ್ಡರ್ಸ್ ನೆದರ್‌ರ್ಲೆಂಡ್​ನ ಬಲಪಂಥೀಯ ನಾಯಕ. ದೇಶದ ಮೂರನೇ ಅತಿ ದೊಡ್ಡ ಪಕ್ಷವಾಗಿರುವ ಪಾರ್ಟಿ ಫಾರ್ ಫ್ರೀಡಂ ಸಂಸ್ಥಾಪಕರಾಗಿರುವ ಅವರು, 1998ರಿಂದಲೂ ಜನಪ್ರತಿನಿಧಿ ಸಭೆಯ ನಾಯಕರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries