ತಿರುವನಂತಪುರ: ಕಲ್ಲುವತ್ತುಕಲ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಆಹಾರ ವಿಷವಾದ ಘಟನೆಯಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಜರಗಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಉಷಾ ಕುಮಾರಿ ಹಾಗೂ ಸಹಾಯಕಿ ಸಜ್ನಾ ಬೀವಿ ಅವರನ್ನು ಅಮಾನತು ಮಾಡಲಾಗಿದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಇಬ್ಬರೂ ತಪ್ಪಿತಸ್ಥರೆಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ನಂತರ ಅಮಾನತುಗೊಳಿಸಲಾಗಿದೆ. ಅಂಗನವಾಡಿಯ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾದರು ಎಂದು ಪೋಷಕರು ಆರೋಪಿಸಿದ್ದರು.
ಅಂಗನವಾಡಿಯ ನಾಲ್ವರು ಮಕ್ಕಳು ಚಿಕಿತ್ಸೆ ಪಡೆದುಕೊಂಡರು. ನಂತರ ಸ್ಥಳೀಯರು ಹಾಗೂ ಪಾಲಕರು ನಡೆಸಿದ ಹುಡುಕಾಟದಲ್ಲಿ ಅಂಗನವಾಡಿಯಲ್ಲಿ ಹುಳುಗಳಿರುವ ಅನ್ನ ಪತ್ತೆಯಾಗಿದೆ.