ಬದಿಯಡ್ಕ: ಇತಿಹಾಸ ಪ್ರಸಿದ್ಧ ತುಳುನಾಡಿನ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಪುನರುದ್ಧಾರ ಕಾರ್ಯ ಯೋಜನೆಗೆ ನಿರ್ಧರಿಸಲಾಗಿದೆ.
ಜ್ಯೋತಿಷ್ಯ ರತ್ನ ದೈವಜ್ಞ ಮೋಹನ್ ಮಾಯಿಪ್ಪಾಡಿ ಅವರ ಮಾರ್ಗದರ್ಶನದಂತೆ ತಲೆಮಾರುಗಳಿಂದ ಪರಂಪರಾಗತವಾಗಿ ಬಂದ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಅಭಿವೃದ್ಧಿ ಸಮಿತಿ ರೂಪೀಕರಣ ಸಭೆಯು ಕನ್ಯಪ್ಪಾಡಿಯ ಸಾಂಸ್ಕøತಿಕ ಭವನದಲ್ಲಿ ಜರಗಿತು.
ಧಾರ್ಮಿಕ ಮುಂದಾಳು, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಶಾಲೆಯ ಪ್ರಬಂಧಕ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪ್ಲೇರಿ ಮಂತ್ರ ಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕ ಲಕ್ಷ್ಮಣ ಪೆರಿಯಡ್ಕ, ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಡಿ.ಶಂಕರ, ನ್ನಿವೃತ್ತ ತೆಲಂಗಾಣ ಡಿವೈಎಸ್ಪಿ ಬಾಲಕೃಷ್ಣ, ಮುಗು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ನಾರಾಯಣ ಎಸ್, ಧ.ಗ್ರಾ.ಯೋಜನೆಯ ಸೇವಾಪ್ರತಿನಿಧಿ ಬೇಬಿ ಪಿ, ಸಾಮಾಜಿಕ ಮುಂದಾಳುಗಳಾದ ಮದನ ಮಾಡತ್ತಡ್ಕ, ಶಂಕರ ಎಂ, ಜೆ.ಪಿ.ದೇವರಮೆಟ್ಟು,ಸತೀಶ, ಶ್ಯಾಮ್ ಪ್ರಸಾದ್ ಸರಳಿ, ಗಿರಿಜಾ ತಾರನಾಥ್ ಕುಂಬಳೆ, ಸುರೇಶ ಯು, ಉದಯ ಎನ್.ಎಸ್, ಸುಂದರ ಶೇಂತಾರು,ಕೆ.ಕೆ.ಸ್ವಾಮಿಕೃಪಾ, ಶಂಕರ ಸ್ವಾಮಿಕೃಪಾ ಮೊದಲಾದವರು ಭಾಗವಹಿಸಿದ್ದರು. ಆಶೋಕ್ ಎಂ ಅರಿಯಪ್ಪಾಡಿ ಪ್ರಾರ್ಥನೆ ಹಾಡಿದರು. ವಸಂತ ಕನ್ನೆಪ್ಪಾಡಿ ಸ್ವಾಗತಿಸಿ ಕಿಶೋರ್ ಕುಮಾರ್ ಕೆ ನಿರೂಪಿಸಿದರು.
ಅಭಿವೃದ್ಧಿ ಕಾರ್ಯದಂಗವಾಗಿ ವಿಜ್ಞಾಪನ ಪತ್ರ ಬಿಡುಗಡೆ ಹಾಗೂ ನಿಧಿ ಕುಂಭ ಸಮರ್ಪಣಾ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.