ಕಾಸರಗೋಡು: ಬಿಜೆಪಿ ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಜೂ. 23ರಂದು ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 8ಕ್ಕೆ ಶ್ರೀ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡುವರು. 10ಕ್ಕೆ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ಪಂಡಿತ್ ಶ್ಯಾಮಪ್ರಸಾದ್ ಮುಖರ್ಜಿ ಸಂಸ್ಮರಣಾ ಸಭೆಯನ್ನು ಉದ್ಘಾಟಿಸುವರು. ನಂತರ ಕಾರಡ್ಕ, ಬೆಳ್ಳೂರು, ಎಣ್ಮಕಜೆ ಮತ್ತು ಕುಂಬ್ಡಾಜೆ ಪಂಚಾಯಿತಿ ವ್ಯಾಪ್ತಿಯ ಎಂಡೋಸಲ್ಫಾನ್ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.