ಪೆರ್ಲ: ಎಣ್ಮಕಜೆ ಸಾಂತ್ವನ ಬಡ್ಸ್ ವಿಶೇಷ ಶಾಲೆಯ ಪ್ರವೇಶೋತ್ಸವ ಸಂಭ್ರಮದಿಂದ ಜರಗಿತು. ಪಂಚಾಯತಿ ಅಧ್ಯಕ್ಷ ಸೋಮಶೇಖರ. ಜೆ. ಎಸ್. ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಡಾ. ಜಹಾನಾಸ್ ಹಂಸಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ. ಬಿ. ಎಸ್. ಗಾಂಭೀರ್, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್, ಪಂಚಾಯತಿ ಕಾರ್ಯದರ್ಶಿ ಅನ್ವರ್ ರಹಮಾನ್, ಸಿ. ಡಿ. ಎಸ್. ಅಧ್ಯಕ್ಷೆ ಜಲಜಾಕ್ಷಿ, ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷೆ ಆಯಿಷಾ. ಎ. ಎ., ಕುಟುಂಬಶ್ರೀ ಜಿಲ್ಲಾ ಮಿಷನ್ ಬ್ಲಾಕ್ ಸಂಯೋಜಕ ನಿತಿನ್ ಮುಂತಾದವರು ಶುಭ ಹಾರೈಸಿದರು. ಬಡ್ಸ್ ಸ್ಕೂಲ್ ಪ್ರಾಂಶುಪಾಲೆ ಮರಿಯಂಬಿ ಸ್ವಾಗತಿಸಿ, ಮಾತೃಸಂಘದ ಅಧ್ಯಕ್ಷೆ ಸುಜಾತ ವಂದಿಸಿದರು.