ಕಾಸರಗೋಡು: ಚಿನ್ಮಯ ಮಿಷನ್ ಆಶ್ರಯದಲ್ಲಿ ಐದು ದಿವಸಗಳ ಗೀತಾ ಜ್ಞಾನ ಯಜ್ಞವು ಜೂನ್ 20 ರಿಂದ 24 ರವರೆಗೆ ವಿದ್ಯಾನಗರ ಚಿನ್ಮಯಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 5.30 ರಿಂದ 6.30 ರವರೆಗೆ ಗೀತಾಜ್ಞಾನ ಯಜ್ಞ ಉಪನ್ಯಾಸ ನಡೆಯಲಿದೆ.
ಭಗವದ್ಗೀತೆಯ 12ನೇ ಅಧ್ಯಾಯ ಭಕ್ತಿ ಯೋಗದ ಬಗ್ಗೆ ಉಪನ್ಯಾಸದ ನಡೆಯಲಿದೆ. ಚಿನ್ಮಯ ಮಿಷನ್ ಕೇರಳದ ಮುಖ್ಯಸ್ಥ ಸ್ವಾಮಿ ವಿವಿಕಾನಂದ ಸರಸ್ವತಿ ಯಜ್ಞಾಚಾರ್ಯರಾಗಿರುವರು. ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ.ನಾಯರ್ ಉದ್ಘಾಟಿಸುವರು. ಉಪನ್ಯಾಸ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಅನಾನುಕೂಲವಾಗುವವರಿಗೆ ಜೂಮ್ ಮೀಟ್‍ನಲ್ಲಿ ಕಾರ್ಯಕ್ರಮವನ್ನು ಆಲಿಸಬಹುದು. ಉಪನ್ಯಾಸದ ನಂತರ ಪ್ರತಿದಿನ ಗೀತಾ ಆರತಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.