ಕಾಸರಗೋಡು: ನಗರಸಭಾ ವ್ಯಾಪ್ತೊಯಲ್ಲಿ ಮಲೇರಿಯಾ ಮಾಸಾಚರಣೆಯ ಕಾರ್ಯಚಟುವಟಿಕೆಗಳಿಗೆ ಕಸಬ ಕಡಪ್ಪುರದಲ್ಲಿ ಚಾಕನೆ ನೀಡಲಾಯಿತು. ಜಿಲ್ಲಾ ಸೊಳ್ಳೆ ನಿಯಂತ್ರಣ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ಮಲೇರಿಯ ರೀಗ ಪ್ರತಿರೋಧ ಕಾರ್ಯಾಚರಣೆಯನ್ನು ವಾರ್ಡ್ ಕೌನ್ಸಿಲರ್ ಅಜಿತ್ ಕುಮಾರನ್ ಉದ್ಘಾಟಿಸಿದರು. ನಂತರ ಡಿ ವಿ ಸಿ ಘಟಕದ ಹೆಲ್ತ್‍ಸೂಪರ್‍ವೈಸರ್ ವೇಣುಗೋಪಾಲನ್, ಹೆಲ್ತ್ ಇನ್ಸ್‍ಪೆಕ್ಟರ್ ಸರಸಿಜನ್ ಅವರ ನೇತೃತ್ವದಲ್ಲಿ ಕಸಬ ಕಡಪ್ಪುರ ಪ್ರದೇಶಗಳಲ್ಲಿ ಕೆರೆ, ಬಾವಿ, ಮನೆಯ ಟೆರೇಸ್ ಮೇಲ್ಚಾವಣಿಗಳಲ್ಲಿ ದಾಸ್ತಾನುಗೊಳ್ಳುವ ನೀರಿನಲ್ಲಿ ಮಲೇರಿಯಾಕ್ಕೆ ಕಾರಣವಾಗುತ್ತಿರುವ ಅನೋಫಿಲಸ್ ಸೊಳ್ಳೆ ಲಾರ್ವ ಪತ್ತೆ ಹಚ್ಚಲು ತಪಾಸಣೆ ಮತ್ತು ಬೋಧನೆಯನ್ನು ನಡೆಸಲಾಯಿತು. ಮುಂದಿನ ದಿನಗಳಲ್ಲಿಈ ಕ್ಷೇತ್ರದಲ್ಲಿ ಮತ್ತಷ್ಟು ಕಾರ್ಯಾಚರಣೆ ಮುಂದುವರಿಸಲು ತೀರ್ಮಾನಿಸಲಾಯಿತು. ಡಿವಿಸಿ ಘಟಕದ ಇನ್ಸೆಕ್ಟ್ ಸಂಗ್ರಾಹಕರಾದ ಪಿ ತಂಗಮಣಿ , ಎಂ. ಸುನಿಲ್, ಎ ಪ್ರಭಾಕರನ್, ಫೀಲ್ಡ್ ಅಸಿಸ್ಟೆಂಟ್ ಇನ್‍ಚಾರ್ಜ್ ಲತಾ, ಗೀತಾ ಉಪಸ್ಥಿತರಿದ್ದರು.