ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಮಟ್ಟದ ಶಾಲಾ ಪ್ರವೇಶೋತ್ಸವ ಕಯ್ಯಾರು ಡೋನ್ ಬೋಸ್ಕೊ ಎಯುಪಿ ಶಾಲೆಯಲ್ಲಿ ನಡೆಯಿತು. ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಅವರು ಅಕ್ಷರ ಗಳ ಪ್ರದರ್ಶನ ಮೂಲಕ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು.
ಉಪಾಧ್ಯಕ್ಷೆ ಪುಷ್ಪಾ ಜಯಲಕ್ಷ್ಮಿ ಅಧ್ಯಕ್ಷೆ ವಹಿಸಿದ್ದರು. ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜುಲ್ಫಿಕರ್ ಅಲಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರ್, ವೆಲ್ಫೇರ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಯಾಸುನ್ನಿಸಾ, ಸದಸ್ಯರಾದ ಅವಿನಾಶ್ ಮಾಚಾದೋ, ಮಂಜೇಶ್ವರ ಉಪ ಶಿಕ್ಷಣಾಧಿಕಾರಿ ದಿನೇಶ್ ವಿ., ಮಂಜೇಶ್ವರ ಬಿ ಆರ್ ಸಿಯ ಬಿ. ಪಿ. ಸಿ ವಿಜಯಕುಮಾರ್, ಪೈವಳಿಕೆ ಪಿ ಇ ಸಿ ಕಾರ್ಯದರ್ಶಿ ಅಬ್ದುಲ್ ಕರೀಂ ಪಿ.ಕೆ, ಮಂಜೇಶ್ವರ ಬಿ. ಆರ್. ಸಿ ಸಂಯೋಜಕಿ ವಿದ್ಯಾ ಜಿ., ಶಾಲಾ ಸಂಚಾಲಕ ಫಾದರ್ ಹ್ಯಾರಿ ಡಿ ಸೋಜ, ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಜೋರ್ಜ್ ಡಿ ಅಲ್ಮೇಡ, ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ, ಮಾತೆಯರ ಸಂಘದ ಅಧ್ಯಕ್ಷೆ ರಶ್ಮಿ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. ಹೊಸದಾಗಿ ಶಾಲೆಗೆ ಪ್ರವೇಶ ಪಡೆದ ಎಲ್ ಕೆ ಜಿ ಹಾಗೂ 1 ಎ ತರಗತಿಯ ಮಕ್ಕಳನ್ನು ಹೂ ನೀಡಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಸ್ವಾಗತಿಸಿದರು. ಸದಸ್ಯ ಅವಿನಾಶ್ ಮಚಾದೋ ರವರು 1 ಎ ತರಗತಿ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಗಳನ್ನು ವಿತರಿಸಿದರು.
ವಿದ್ಯಾರ್ಥಿ ಗಳಿಂದ ಸಾಂಸ್ಕøತಿ ಕ ಕಾರ್ಯಕ್ರಮ ಜರಗಿತು. ಶಾಲಾ ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್ ಸ್ವಾಗತಿಸಿ,ಮಾಗ್ದಲೆನ್ ಕ್ರಾಸ್ತಾ ವಂದಿಸಿದರು. ಸಿಸ್ಟರ್ ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು.