ಬದಿಯಡ್ಕ: ನಮ್ಮ ಪರಂಪರಾಗತ ದೈವಿಕ ಶಕ್ತಿಗಳ ಪುನರ್ ನವೀಕರಣ, ಆರಾಧನೆಗಳಿಂದ ಸಂಘಟಿತ ಶಕ್ತಿ ಇನ್ನಷ್ಟು ವೃದ್ಧಿಗೆ ಕಾರಣವಾಗುತ್ತದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಆಶ್ರಮದ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮಿಜೀ ನುಡಿದರು.
ಅವರು ಕನ್ನೆಪ್ಪಾಡಿಯಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಕೊಡ್ಯಮ್ಮೆ ಅಂತಲ ಮುಗೇರ ಚಾವಡಿಯ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಕೊಂಡೆವೂರು ಕ್ಷೇತ್ರ ಸಂದರ್ಶಿಸಿ ಸ್ವಾಮಿಜೀಯವರನ್ನು ಭೇಟಿಗೈದ ಸಂದಭರ್Àದಲ್ಲಿ ಆಶೀರ್ವಾದ ಪೂರಕ ಮಾರ್ಗದರ್ಶನ ನೀಡಿದರು.
ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಪರಿಸರದ ಆಸ್ತಿಕ ವರ್ಗವನ್ನು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಸಾನಿಧ್ಯ ಶಕ್ತಿಗಳ ಕೃಪಾಕಟಾಕ್ಷ ಅವರಿಗೂ ಲಭಿಸುವಂತಾಗುವುದಲ್ಲದೆ ನಾಡಿನ ಕ್ಷೇಮಾಭಿವೃದ್ಧಿಗೂ ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊಡ್ಯಮ್ಮೆ ಅಂತಲ ಮುಗೇರ ಚಾವಡಿಯ ಶ್ರೀಮಹಿಷಂದಾಯ ಕೊರಗುತನಿಯ ದೈವಸ್ಥಾನದ ಸೇವಾ ಸಮಿತಿ ಆಧ್ಯಕ್ಷ ಕೆ.ಕೆ.ಸ್ವಾಮಿಕೃಪಾ, ಶಂಕರ ಸ್ವಾಮಿಕೃಪಾ, ಬಾಬು ಕನ್ನೆಪ್ಪಾಡಿ, ಕಿಶೋರ್ ಕುಮಾರ್ ಕೆ.ಮೊದಲಾದವರು ಉಪಸ್ಥಿತರಿದ್ದರು.