ತಿರುವನಂತಪುರ: ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯೊಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ನರವಿಜ್ಞಾನ ಮತ್ತು ನೆಫ್ರಾಲಜಿ ವಿಭಾಗದ ಮುಖ್ಯಸ್ಥರನ್ನು ಅಮಾನತುಗೊಳಿಸಲಾಗಿದೆ. ನಿಖರವಾದ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಅಂಗಾಂಗ ತಂದ ಬಾಕ್ಸ್ ಅನ್ನು ನೌಕರರಲ್ಲದವರು ತೆಗೆದುಕೊಂಡು ಹೋಗಿದ್ದಾರೆ ಎಂಬ ಆಸ್ಪತ್ರೆ ಅಧಿಕಾರಿಗಳ ದೂರಿನ ಬಗ್ಗೆಯೂ ತನಿಖೆ ನಡೆಸಲಾಗುವುದು. ಸಮಗ್ರ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಸಮನ್ವಯದಲ್ಲಿ ದೋಷ ಉಂಟಾಗಿದೆ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ. 2.45ಕ್ಕೆ ರೋಗಿಗೆ ಕಿಡ್ನಿ ಮ್ಯಾಚ್ ಆಗಿತ್ತು. 5.30ಕ್ಕೆ ಆಂಬುಲೆನ್ಸ್ ಬಂದಿತ್ತು ಎಂದು ಸಚಿವರು ಗಮನ ಸೆಳೆದರು.
ಆಂಬ್ಯುಲೆನ್ಸ್ ಬಂದಾಗ ಹೊರಗಿನಿಂದ ಬಂದವರು ಕಿಡ್ನಿ ಇದ್ದ ಬಾಕ್ಸ್ ತೆಗೆದುಕೊಂಡು ಹೋದರು. ಇದರಲ್ಲಿ ವಿವಾದಗಳಿವೆ. ಇವರು ವೈದ್ಯರಾಗಿರಲಿಲ್ಲ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.