ಮಧೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ವಲಯದ ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರ ಉಳಿಯತ್ತಡ್ಕ ಇದರ ಆಶ್ರಯದಲ್ಲಿ "ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮ" ಬಗ್ಗೆ ಮಾಹಿತಿ ಕಾರ್ಯಗಾರವು ಪರಕ್ಕಿಲ ತರುಣ ಕಲಾ ವೃಂದ ಉಳಿಯದಲ್ಲಿ ಜರಗಿತು. ಮಧೂರು ಗ್ರಾಮ ಪಂಚಾಯತಿ ಸಿರಿಬಾಗಿಲು ಸದಸ್ಯ ಉದಯಕುಮಾರ್ ಸಿ.ಎಚ್.ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ವಿನಯ ಅದ್ಯಕ್ಷತೆ ವಹಿಸಿದ್ದರು ಜ್ಞಾನವಿಕಾಸದ ಸಮನ್ವಯ ಅಧಿಕಾರಿ ಸಂಗೀತಾ, ಧ.ಗ್ರಾ.ಯೋಜನೆಯ ಸೇವಾಪ್ರತಿನಿಧಿ ಜ್ಯೋತಿ ಸಭೆಯಲ್ಲಿ ಉಪಸ್ಥಿತರಿದ್ದರು.ನಮಿತಾ ಸ್ವಾಗತಿಸಿ, ಮೀರ ವಂದಿಸಿದರು. ಸುಮಿತ್ರಾ ಕಾರ್ಯಕ್ರಮ ನಿರೂಪಿಸಿದರು.