ಕಾಸರಗೋಡು: ಕಾಞಂಗಾಡು ನಗರಸಭಾ ಆರೋಗ್ಯ ಇಲಾಖೆ ನಗರದ ಹೊಟೇಲ್‍ಗಳಲ್ಲಿ ತಪಾಸಣೆ ನಡೆಸಿ ಹಳಸಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದೆ. ನಗರದ ಹತ್ತಕ್ಕೂ ಹೆಚ್ಚು ಹೋಟೆಲ್‍ಗಳಿಗೆ ದಾಳಿ ನಡೆಸಿ, ಕೆಲವು ದಿವಸಗಳ ಹಳತಾದ ಕೋಳಿ ದನದ ಮಾಂಸ, ಮಟನ್, ಪರೋಟ, ಚೈನೀಸ್ ಮಸಾಲೆ, ಎಣ್ಣೆಕಾಳು, ಹಳಸಿದ ಗಂಜಿ, ಮೊಸರು ವಶಪಡಿಸಿಕೊಳ್ಳಲಾಗಿದೆ. ಆರೋಗ್ಯ ಮೇಲ್ವಿಚಾರಕ ಕೆ.ಪಿ.ಶೈನ್, ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ವಿ.ವಿ.ಬೀನಾ ಹಾಗೂ 2ನೇ ಗ್ರೇಡ್ ಜೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಗಳಾದ ಪಿ.ವಿ.ಸಿಮಾ, ಬಿಜು ಅನೂರ್, ಶಿಜು ನೇತೃತ್ವ ವಹಿಸಿದ್ದರು. ಹೋಟೆಲ್‍ಗಳಲ್ಲಿ ಉತ್ತಮ ಅಹಾರ ಪೂರೈಕೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ತಪಾಸಣೆ ಚುರುಕುಗೊಳಿಸಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಕೆ.ವಿ ಸುಜತಾ ತಿಳಿಸಿದ್ದಾರೆ.
ನಗರಸಭಾ ಆರೋಗ್ಯ ಇಲಾಖೆಯಿಂದ ಕಾರ್ಯಾಚರಣೆ: ಹಳಸಿದ ಆಹಾರ ಪದಾರ್ಥ ವಶ
0
ಜೂನ್ 19, 2022
Tags