ಕಾಸರಗೋಡು: ಕೊರೋನಾ ಕಾರಣದಿಂದ ನಿಲುಗಡೆಗೊಂಡಿದ್ದ ಯಕ್ಷಗಾನ ತರಗತಿಗಳು ಮತ್ತೆ ಪ್ರಾರಂಭಿಸುವ ನಿಟ್ಟಿನಲ್ಲಿ ಕಾಸರಗೋಡು ಶ್ರೀವೆಂಕಟರಮಣ ಸ್ವಾಮಿ ಯಕ್ಷಗಾನ ಕಲಾಕೇಂದ್ರದ ವಿಶೇಷ ಸಭೆ ಭಾನುವಾರ ಕಲಾಕೇಂದ್ರದಲ್ಲಿ ನಡೆಯಿತು. ಕಲಾಕೇಂದ್ರದ ಅಧ್ಯಕ್ಷ ಕೆ ಎನ್ ವೆಂಕಟರಮಣ ಹೊಳ್ಳ ಅ|ಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕಲಾ ಬೆಳವಣಿಗೆಗಾಗಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಯಕ್ಷಗಾನ ತರಗತಿಗಳನ್ನು ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಹಿಮ್ಮೇಳ ತರಗತಿಗಳನ್ನು ನಡೆಸುವುದರ ಬಗ್ಗೆ ವಿಷಯ ಪ್ರಸ್ತಾಪನೆ ನಡೆಸಲಾಯಿತು. ಯಕ್ಷಗಾನ ಪ್ರಸಂಗ ಅಭ್ಯಾಸ , ಬಣ್ಣಗಾರಿಕೆ, ವೇಷ ಕಟ್ಟುವಿಕೆ ಮೊದಲಾದ ತರಗತಿಗಳು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.