ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ವಿವಿಧ ಕ್ಲಬ್‍ಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಶಾಲಾ ಮುಖೋಪಾಧ್ಯಾಯ ಶಿವಶಂಕರ ಭಟ್ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಕ್ಲಬ್ ವತಿಯಿಂದ ಹರ್ಷಿತ ಅವಳಿಂದ ಹಾಡು, ವಿಜ್ಞಾನ ಕ್ಲಬ್ ವತಿಯಿಂದ ಭವಿಷ್ ನಿಂದ ವಿಜ್ಞಾನ ಕೌತುಕ, ಸಮಾಜ ವಿಜ್ಞಾನ ಕ್ಲಬ್ ವತಿಯಿಂದ ಲಿಖಿತ ಅವಳಿಂದ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಭಾಷಣ ನಡೆಯಿತು. ವಿದ್ಯಾರ್ಥಿಗಳ ಕಲಾ ನೈಪುಣ್ಯತೆ ಪ್ರದರ್ಶನ ಗಣಿತ ಕ್ಲಬ್ ವತಿಯಿಂದ ವಿದ್ಯಾರ್ಥಿಗಳ ಗಣಿತ ಜಾÐನ ಪರೀಕ್ಷಿಸಲು ಪ್ರೀತಂ ನಿಂದ ರಸಪ್ರಶ್ನೆ, ಶ್ರೀನಿವಾಸ ರಾಮಾನುಜನ್ ಭಾವಚಿತ್ರ ಪ್ರದರ್ಶನವನ್ನು ವಿದ್ಯಾರ್ಥಿಗಳಾದ ಜಯಪ್ರದ, ಲಿಖಿತ, ಸ್ವಾಲಿಹಾ ಮತ್ತು ರೀತಾ ಶೆರೆಲ್ ಡಿ'ಸೋಜ ನಡೆಸಿಕೊಟ್ಟರು. ಹಿರಿಯ ಅಧ್ಯಾಪಿಕೆ ಲಲಿತ ಟೀಚರ್ ಮತ್ತು ಹಿರಿಯ ಅಧ್ಯಾಪಕ ವೆಂಕಟೇಶ್ ಪ್ರಸಾದ್ ಶುಭ ಹಾರೈಸಿದರು. ಸುಶ್ಮಿತ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಫಾತಿಮತ್ ಅಝ್ಮಿಯ ವಂದಿಸಿದರು. ನೇಹಶ್ರೀ ಕಾರ್ಯಕ್ರಮ ನಿರ್ವಹಿಸಿದರು.