ಉಪ್ಪಳ: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾದಿಕಾರ ಆಶ್ರಯದಲ್ಲಿ ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ಇದರ ಸಹಯೋಗದಲ್ಲಿ "ಗಡಿನಾಡ ಸಾಂಸ್ಕøತಿಕ ಉತ್ಸವ" ಭವ್ಯ ಮೆರವಣಿಗೆ, ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿ.ವಿ. ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯರು ನೇರವೇರಿಸಿ ಊರಿನ ಸಮಸ್ತರ ಒಗ್ಗೂಡಿಕೆಯಲ್ಲಿ ನಡೆದಿರುವುದು ಸಂತೋಷದ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧಾÀ್ಯಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ. ಬಿ., ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕರ್ನಾಟಕ ರಾಜ್ಯ ಕಾಂiÀರ್iನಿರತ ಪತ್ರಕರ್ತ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಎ. ಆರ್ ಸುಬ್ಬಯ್ಯಕಟ್ಟೆ ಮತ್ತು ಗಾಯಕ ಗೋ. ನಾ. ಸ್ವಾಮಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಮೀನಾರು ವಿಶ್ವನಾಥ ಆಳ್ವ ಮತ್ತು ಹಿರಿಯ ಕವಿ ಹಾಗು ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ರವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪರಮಪೂಜ್ಯರು ತಮ್ಮ ಆಶೀರ್ವಚನದಲ್ಲಿ "ಈ ರೀತಿಯ ಕನ್ನಡ ಸಂಸ್ಕøತಿಯ ಗಂಗಾ ಪ್ರವಾಹದ ಹರಿವಿಗೆ ನಮ್ಮ ಮಠ ನಿರಂತರ ಬೆಂಬಲ ನೀಡುತ್ತದೆ ಎಂದರಲ್ಲದೇ, ಮುಂದಿನ ಪೀಳಿಗೆಗೆ ಕನ್ನಡ ಸಂಸ್ಕøತಿ ಸಂಸ್ಕಾರವನ್ನು ಉಳಿಸಿಕೊಡಬೇಕು" ಎಂದು ಅಭಿಪ್ರಾಯಪಟ್ಟರು. ಡಾ. ಸಿ. ಸೋಮಶೇಖರ್ ರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ "ಕಾಸರಗೋಡು ಕೇರಳದಲ್ಲಿ ಇದ್ದರೂ ಭಾವನಾತ್ಮಕವಾಗಿ ಕನ್ನಡ ನಾಡಲ್ಲೇ ಇದೆ. ಸಿರಿಗನ್ನಡ ಉಳಿಕೆಗೆ ಇನ್ನಷ್ಟು ಕಡೆ ಇಂತಹ ಉತ್ಸವಗಳು ನಡೆÀಯಬೇಕು" ಎಂದು ಅಪೇಕ್ಷಿಸಿದರು.
ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರ ಸಮೂಹ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಮೀರಾ ಆಳ್ವ ವಂದಿಸಿದರು. ಅರವಿಂದಾಕ್ಷ ಭಂಡಾರಿ, ದಿನಕರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಕೊಂಡೆವೂರು ಶಾಲಾ ವಿದ್ಯಾರ್ಥಿಗಳ ಆಕರ್ಷಕ ಯೋಗಛಾಪ್ ಪ್ರದರ್ಶನ, ಮೆರವಣಿಗೆಯಲ್ಲಿ ಯಕ್ಷಗಾನ ವೇಷಗಳು, ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಮಾದಾಪುರದ ಶ್ರೀ ಬಸವೇಶ್ವರ ರೈತ ಯುವಕ ಸಂಘದ ಲೋಹಿತ್ ಕುಮಾರ್ ಮತ್ತು ತಂಡದವರಿಂದ ಆಕರ್ಷಕ ಡೊಳ್ಳುಕುಣಿತ ಮತ್ತು ಮುಳ್ಳೇರಿಯದ ಬಿಂದು ಶ್ರೀಧರ್ ಹಾಗೂ ಬಳಗದವರಿಂದ ತಿರುವಾದಿರಗಳ ಪ್ರದರ್ಶನ ನಡೆಯಿತು.