HEALTH TIPS

ಉಪ್ಪಿನಕಾಯಿಯಿಂದ ಮೇಲೋಗರಗಳವರೆಗೆ; ರುಚಿಕರವಾದ ತಿನಿಸುಗಳೊಂದಿಗೆ 'ಹಸಿರೆಲೆ ಎಲೆಗಳ ತರಕಾರಿ ಉತ್ಸವ

                ಕಾಸರಗೋಡು: ಚೆಮ್ಮನಾಡು ಕುಟುಂಬಶ್ರೀ ಸಿಡಿಎಸ್ ಆಯೋಜಿಸಿದ ಹಸಿರೆಲೆ ತರಕಾರಿ ಉತ್ಸವ ಗ್ರಾಮಾಂತರ ಪ್ರದೇಶದಲ್ಲಿ ಸಿಗುವ ಎಲೆಗಳನ್ನು ಬಳಸಿ ಉಪ್ಪಿನಕಾಯಿಯಿಂದ ತೊಡಗಿ ಮೇಲೋಗರದವರೆಗೆ ವೈವಿಧ್ಯಮಯ ತಿನಿಸು ತಯಾರಿಸುವ ಉತ್ಸವ ಗಮನ ಸೆಳೆಯಿತು.

                    ಸುಮಾರು 120 ಕುಟುಂಬಶ್ರೀ ಘಟಕಗಳ ಸುಮಾರು 500 ಮಹಿಳೆಯರು ಉತ್ಸವದಲ್ಲಿ ಭಾಗವಹಿಸಿದ್ದರು. ಮಾವು, ಹಲಸು, ಹುಣಸೆಹಣ್ಣು, ಪ್ಯಾಶನ್‍ಫ್ರೂಟ್ ಎಲೆ, ಬೆಂಡೆ, ಬದನೆ, ಅಲಸಂಡೆ, ಕರಿಬೇವಿನ ಸೊಪ್ಪು, ಕುಂಬಳಕಾಯಿ, ತವರೆ, ಪಾಲಕ್ ಮತ್ತು ಕೊತ್ತಂಬರಿ ಸೇರಿದಂತೆ ಸುಮಾರು 100 ಹಸಿರು ಎಲೆಗಳಿಂದ 300 ಕ್ಕೂ ಹೆಚ್ಚು ಖಾದ್ಯಗಳನ್ನು ಫೆಸ್ಟ್‍ನಲ್ಲಿ ಪ್ರದರ್ಶಿಸಲಾಗಿತ್ತು. 

                 ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್ ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಮುಮ್ತಾಝ್ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಎಡಿಎಂಸಿ ಸಿಎಚ್. ಇಕ್ಬಾಲ್ ಮುಖ್ಯ ಅತಿಥಿಗಳಾಗಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಯೇಷಾ ಅಬೂಬಕರ್, ರೆಮಾ ಗಂಗಾಧರನ್, ಶಂಶುದ್ದೀನ್ ರಾಜನ್ ಕೆ ಪೆÇಯಿನಾಚಿ, ಸುಜಾತಾ ರಾಮಕೃಷ್ಣನ್, ವೀಣಾರಾಣಿ, ಶಂಕರ, ರೇಣುಕಾ ಭಾಸ್ಕರನ್, ಮೈಮುನಾ, ಕಾರ್ಯದರ್ಶಿ ಎಂ ಸುರೇಂದ್ರನ್, ಸಿಡಿಎಸ್ ಉಪಾಧ್ಯಕ್ಷ ಅನಿಸಾ ಪಾಲೋತ್, ಗಿಗಿ ಎ ಸತೀಶ್ ಮಾತನಾಡಿದರು. ಸಿಡಿಎಸ್ ಸದಸ್ಯರು ಹಾಗೂ ಬ್ಲಾಕ್ ಸಂಯೋಜಕರು ನೇತೃತ್ವ ವಹಿಸಿದ್ದರು.

                 ವಾರ್ಡ್ 12ರ ಶ್ರೀಲಕ್ಷ್ಮೀ ಕುಟುಂಬಶ್ರೀ ಪ್ರಥಮ, ವಾರ್ಡ್ 1ರ ಅಲ್ ಅಮೀನ್ ಕುಟುಂಬಶ್ರೀ 17 ಬಗೆಯ ಸೊಪ್ಪಿನ ತರಕಾರಿಗಳಲ್ಲಿ ಪ್ರಥಮ, ಹದಿನೈದನೇ ವಾರ್ಡ್ ನ ಸ್ವಾತಿ ಬಿ ಹಾಗೂ ಒಂಬತ್ತನೇ ವಾರ್ಡ್ ನ ರೋಸ್ ಕುಟುಂಬಶ್ರೀ ಕೂಟ  ತೃತೀಯ ಸ್ಥಾನ ಪಡೆದರು.

               ಫೆಸ್ಟ್ ಅಂಗವಾಗಿ ಆಯೋಜಿಸಿದ್ದ ಮೈಕ್ರೋ ಗ್ರೀನ್ ಸ್ಪರ್ಧೆಯಲ್ಲಿ 12ನೇ ವಾರ್ಡ್ ನ ಸುವರ್ಣ ಕುಟುಂಬಶ್ರೀ ಪ್ರಥಮ, 5ನೇ ವಾರ್ಡ್ ನ ತನಿಮಾ ಕುಟುಂಬಶ್ರೀ ದ್ವಿತೀಯ,  1ನೇ ವಾರ್ಡ್ ನ ಅಲ್ಪಲಾ ಕುಟುಂಬಶ್ರೀ ತೃತೀಯ  ಸ್ಥಾನ ಪಡೆದರು. ಚೆಮ್ಮನಾಡ್ ಪಂಚಾಯತಿಯ ಕುಟುಂಬಶ್ರೀ ಸಿಡಿಎಸ್ ಪ್ರತಿ ತಿಂಗಳು ಪಂಚಾಯತಿ ವ್ಯಾಪ್ತಿಯಲ್ಲಿ 500 ಕ್ಕೂ ಹೆಚ್ಚು ಕುಟುಂಬಶ್ರೀ ಘಟಕಗಳನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್ ಮಾತನಾಡಿ, ಕಳೆದ ತಿಂಗಳು ಹಲಸು  ಫೆಸ್ಟ್ ಆಯೋಜಿಸಲಾಗಿದ್ದು, ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಲಿವೆ ಎಂದಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries