ಮಂಜೇಶ್ವರ: ಆನೆಕಲ್ಲು ಎಯುಪಿ ಶಾಲೆಯಲ್ಲಿ ವಾಚನ ವಾರದ ಉದ್ಘಾಟನೆ ನಿನ್ನೆ ನಡೆಯಿತು.
ಮುಖ್ಯೋಪಾಧ್ಯಾಯಿನಿ ರೇಣುಕಾ.ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಬಂಧಕ ಮುರಳಿ ಶ್ಯಾಮ್, ನೌಕರ ಸಂಘದ ಕಾರ್ಯದರ್ಶಿ ರವಿಶಂಕರ್ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕ ವೀರೇಶ್ವರ ಭಟ್ ಅವರು ಓದುವ ಮಹತ್ವವನ್ನು ವಿವರಿಸಿದÀರು. ಶಾಲಾ ಅಧ್ಯಾಪಕ ಸಂತೋಷ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಅಧ್ಯಾಪಕ ಹರೀಶ್ ಸ್ವಾಗತಿಸಿ, ಅಧ್ಯಾಪಕಿ ಸಿತಾರ ಕಾದನ್ ವಂದಿಸಿದರು.