ಕಾಸರಗೋಡು: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಹರೀಶ್ಚಂದ್ರ ನಾಯ್ಕ್ ಅವರಿಗೆ ಬಡ್ತಿ ನೀಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರನ್ನು ಕೋಯಿಕ್ಕೋಡ್ ಸಂಚಾರಿ ದಳ ಎಸ್.ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಬದಿಯಡ್ಕ ಸನಿಹದ ಕರಿಂಬಿಲ ನಿವಾಸಿಯಾಗಿರುವ ಇವರು ಕಾಸರಗೋಡು ನಗರ, ಆದೂರು, ಚಂದೇರ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿ ನಂತರ ಸರ್ಕಲ್ ಇನ್ಸ್‍ಪೆಕ್ಟರ್, ಡಿವೈಎಸ್‍ಪಿಯಾದ ನಂತರ ಹೆಚ್ಚುವರಿ ಎಸ್‍ಪಿ ಆಗಿ ಕಾಸರಗೋಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹರೀಶ್ಚಂದ್ರ ನಾಯ್ಕ್ ಅವರು ಕಳೆದ ವರ್ಷ ರಾಷ್ಟ್ರಪತಿಯವರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.