ಮುಳ್ಳೇರಿಯ: ಕೆಎಸ್ ಟಿಎ ಕಾಸರಗೋಡು ಉಪಜಿಲ್ಲಾ ಸಮಿತಿ ವತಿಯಿಂದ ಮಕ್ಕಳ ವಸತಿ ಯೋಜನೆಯ ಅಂಗವಾಗಿ ಬೇಡಗ ಚೆರಿಪ್ಪಾಡಿಯಲ್ಲಿ ನಿರ್ಮಿಸುತ್ತಿರುವ ಮನೆಗೆ ಶಾಸಕ ಸಿ.ಎಚ್.ಕುಂಜಂಬು ಅಡಿಗಲ್ಲು ಹಾಕಿ ಶಿಲಾನ್ಯಾಸ ನೆರವೇರಿಸಿದರು. ಜಯಪುರ ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಟಿಎ ರಾಜ್ಯ ಕಾರ್ಯದರ್ಶಿ ಕೆ.ರಾಘವನ್, ರಾಜ್ಯ ಸಮಿತಿ ಸದಸ್ಯರಾದ ಎನ್.ಕೆ.ಲಸಿತಾ, ಕೆ.ಹರಿದಾಸ್ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಉಪಾಧ್ಯಕ್ಷೆ ಎ.ಮಾಧವನ್, ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಬಾಲಕೃಷ್ಣನ್ ಮಂಜಳಪಾರೆ, ರಾಧಾಕೃಷ್ಣನ್ ಚೆರಿಪ್ಪಾಡಿ, ರಮಣಿ ದಾಮೋದರನ್, ಟಿ.ಪ್ರಕಾಶನ್, ಕೆ.ಜಿ.ಪ್ರತೀಶ್, ಎ.ಮಾಲತಿ, ಎ.ಶ್ರೀಕುಮಾರ್. ,ಪಿ.ವಿ.ಸಸಿ, ಸಿ.ಕೆ.ಜಗದೀಶ್, ಅನೀಶ್ ರಾಜ್, ಇ.ವಿನೋದ್ ಕುಮಾರ್ ಮಾತನಾಡಿದರು. ಉಪಜಿಲ್ಲಾ ಕಾರ್ಯದರ್ಶಿ ಸಿ.ಪ್ರಶಾಂತ್ ಸ್ವಾಗತಿಸಿ, ವಂದಿಸಿದರು.