ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯಲ್ಲಿ ವಾಚನ ಮಾಸಾಚರಣೆ ಹಾಗೂ ವಿದ್ಯಾರಂಗ ಸಾಹಿತ್ಯ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ, ಸ್ವರ್ಗ ಶಾಲಾ ಹಳೆ ವಿದ್ಯಾರ್ಥಿನಿ ನಳಿನಿ ಸೈಪಂಗಲ್ಲು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಅಧ್ಯಕ್ಷತೆ ವಹಿಸಿದ್ದರು.ಮಕ್ಕಳು ಸ್ವರಚಿತ ಕಥೆ ಕವನ ವಾಚಿಸಿ ಪ್ರಬಂಧ ಮಂಡಿಸಿದರು.ಶಿಕ್ಷಕ ಸಚ್ಚಿದಾನಂದ ಎಸ್. ದಿವ್ಯ ಸಾಗರ್ ದಿನಾಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಶಾಲಾ ಗ್ರಂಥಾಲಯ ಸಂಚಾಲಕ ಶ್ರೀಹರಿಶಂಕರ ಶರ್ಮ ಮಕ್ಕಳಿಗೆ ಶಾಲಾ ಗ್ರಂಥಾಲಯ ವೀಕ್ಷಣೆ ಏರ್ಪಡಿಸಿ ಪುಸ್ತಕ ಪ್ರದರ್ಶನ ಪರಿಚಯಿಸಿದರು.ಶಿಕ್ಷಕ ಎಸ್.ಎನ್ ವೆಂಕಟ ವಿದ್ಯಾಸಾಗರ ಸ್ವಾಗತಿಸಿದರು.ಶಿಕ್ಷಕ ಪದ್ಮನಾಭ ಆರ್. ವಂದಿಸಿದರು.ಏಳನೇ ತರಗತಿ ವಿದ್ಯಾರ್ಥಿನಿ ರಚನಾ ಹಾಗೂ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.