ಕಾಸರಗೋಡು|: ಚೀಮೇನಿ ಪುಲಿಯನ್ನೂರ್ ನಿವಾಸಿ, ನಿವೃತ್ತ ಶಿಕ್ಷಕಿ ಜಾನಕಿ ಟೀಚರ್(68)ಕೊಲೆ ಪ್ರಕರಣದ ಆರೋಪಿಗಳಾದ ಚೀಮೇನಿ ಪುಲಿಯನ್ನೂರ್ ಮಕ್ಲಿಕೋಡ್ ನಿವಾಸೊ ಅರುಣ್ ಕುಮಾರ್ ಅಲಿಯಾಸ್ ಅರುಣಿ(30)ಮತ್ತು ಪುಲಿಯನ್ನೂರ್ ಚೇರ್ಕಳಂ ನಿವಾಸಿ ವಿಶಾಖ್(28)ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಒಂದೂಕಾಲು ಲಕ್ಷ ರೂ. ದಂಡ ವಿಧಿಸಿದೆ. ಇನ್ನೊಬ್ಬ ಆರೋಪಿ ರಿನಿಶ್ ಎಂಬಾತನ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಈತನನ್ನು ಖುಲಾಸೆಗೊಳಿಸಲಾಗಿದೆ.
ಪುಲಿಯನ್ನೂರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ಜಾನಕಿ ಅವರನ್ನು ತಂಡ 2017 ಡಿ.3ರಂದು ರಾತ್ರಿ ಕತ್ತು ಸೀಳಿ ಕೊಲೆಗೈದು, ಇವರ ಪತಿ ಕೃಷ್ಣನ್ ಅವರನ್ನೂ ಗಂಭೀರ ಗಾಯಗೊಳಿಸಿತ್ತು. ನಂತರ 13ಪವನು ಚಿನ್ನಾಭರಣ ಮತ್ತು 92ಸಾವಿರ ರಊ. ನಗದಿನೊಂದಿಗೆ ಪರಾರಿಯಾಗಿದ್ದರು. ಆರೋಪಿಗಳು ಶಿಕ್ಷಕಿಯ ಶಿಷ್ಯಂದಿರಾಗಿದ್ದಾರೆ. ನೀಲೇಶ್ವರ ಸರ್ಕಲ್ ಇನ್ಸ್‍ಪೆಕ್ಟರ್ ಉಣ್ಣಿಕೃಷ್ಣನ್ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸಿ,ಆರೋಪಿಗಳನ್ನು ಬಂಧಿಸಿದ್ದರು.