ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಮತ್ತು "ನಾವೂ ಕೃಷಿಯೆಡೆಗೆ-ನಮಗೂ ಸಸಿ ನೆಡಬೇಕು'ಎಂಬ ವಿಶೇಷ ಕಾರ್ಯಕ್ರಮ ಕಾಸರಗೋಡು ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಶಾಲಾ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಸಸಿ ನೆಡುವ ಮೂಲಕ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ಅಧ್ಯಕ್ಷ ವಿ.ಎಂ. ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಹಾಯಕ ನಿರ್ದೇಶಕಿ ಅನಿತಾ ಕೆ ಮೆನನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 'ಆತ್ಮ' ಉತ್ಪನ್ನ ಪೆÇ್ರಜೆಕ್ಟ್ ನಿರ್ದೇಶಕರು. ಪಿ. ಸೆಲೀನಮ್ಮ 'ಆತ್ಮ' ಯೋಜನೆ ಬಗ್ಗೆ ವಿವರಿಸಿದರು. ನಗರ ಸಭೆ ಕೌನ್ಸಿಲರ್‍ಗಳಾದ ಕೆ. ಅಶ್ವಿನಿ. ಪಿ. ರಮೇಶ್, ಮುನ್ಸಿಪಲ್ ಕಾರ್ಯದರ್ಶಿ ಎಸ್. ಬಿಜು, ಪಿ ಟಿ ಎ ಅಧ್ಯಕ್ಷ ಕೆ. ಆರ್. ಹರೀಶ್, ಕೆ. ಎ. ಮಹಮ್ಮದ್ ಬಶೀರ್, ಕೆ. ಸುರೇಂದ್ರನ್ ಉಪಸ್ಥಿತರಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಎ. ಯಶೋಧ ವಂದಿಸಿದರು.