ಕೊಚ್ಚಿ: ಉತ್ತರ ಪ್ರದೇಶದಿಂದ ಕೇರಳಕ್ಕೆ ವಲಸೆ ಬಂದ ಕುಟುಂಬವೊಂದಕ್ಕೆ ಸೇರಿದ 16 ವರ್ಷದ ಬಾಲಕ ಅಶದ್ ಹಾಸಿಂ ಕೇರಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್ ಪಡೆದು ಭಾಷೆಯ ಗಡಿಯನ್ನು ದಾಟಿ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾನೆ.

ಕಲೂರ್ ಎಂಬಲ್ಲಿರುವ ದಾರುಲ್ ಉಲೂಂ ವಿಎಚ್‌ಎಸ್‌ಎಸ್‌ನ ವಿದ್ಯಾರ್ಥಿಯಾಗಿದ್ದಾನೆ ಅಶದ್. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಮುಹಮ್ಮದ್ ಹಾಶಿಂ ಮತ್ತು ಮಹಜಬೀನ್ ಬಾನು ದಂಪತಿ ಅಶದ್‌ಗೆ ಒಂದು ವರ್ಷವಿರುವಾಗಲೇ ಕೇರಳಕ್ಕೆ ವಲಸೆ ಬಂದಿದ್ದರು.
ʻʻಆರಂಭದಲ್ಲಿ ಮಲಯಾಳಂ ಕಲಿಯಲು ಬಹಳ ಕಷ್ಟಪಟ್ಟಿದ್ದರೂ ಶಿಕ್ಷಕರ ಸಹಕಾರದಿಂದ ಭಾಷೆಯಲ್ಲಿ ಪಾರಂಗತ್ಯ ಸಾಧಿಸಿದೆ. ಆರಂಭದಲ್ಲಿ ಮಲಯಾಳಂ ವಿಷಯದಲ್ಲಿ ಕಡಿಮೆ ಅಂಕಗಳು ದೊರಕುತ್ತಿದ್ದವು ಆದರೆ ಇತರ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದೆ. ಆದರೆ ಮಲಯಾಳಂ ಚೆನ್ನಾಗಿ ಕಲಿಯಬೇಕೆಂದು ಪಟ್ಟ ಶ್ರಮ ಫಲ ನೀಡಿದೆ ಹಾಗೂ ನನ್ನ ಅಂಕಗಳು ಸುಧಾರಿಸುತ್ತಾ ಹೋಯಿತು. ಹತ್ತನೇ ತರಗತಿಯ ಮಾದರಿ ಪರೀಕ್ಷೆಯಲ್ಲಿ 40ರಲ್ಲಿ ನಾನು 38 ಅಂಕ ಗಳಿಸಿದ್ದೆ,ʼʼಎಂದು ಆತ ಹೇಳುತ್ತಾನೆ.
ಪ್ಲಸ್ ಒನ್ ಕೋರ್ಸ್ ನಲ್ಲಿ ವಿಜ್ಞಾನ ವಿಷಯ ಆರಿಸಲು ಅಶದ್ ನಿರ್ಧರಿಸಿದ್ದಾನೆ.
ಅಶದ್ ತಂದೆ ಕೇರಳದಲ್ಲಿ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಾರೆ. ಆತನ ಸಹೋದರಿ ಫಲಕ್ ಬಾನು ಎಸ್ಸೆಸ್ಸೆಲ್ಸಿಯಲ್ಲಿ 5 ವಿಷಯಗಳಲ್ಲಿ ಎ+ ಪಡೆದಿದ್ದಳು.