ಮಂಜೇಶ್ವರ: ಕುಲಾಲ ಸಂಘ ವರ್ಕಾಡಿ ಶಾಖೆಯ ಮಹಾಸಭೆ ದೈಗೋಳಿ ಶ್ರೀ ರಾಮ ಕೃಷ್ಣ ಭಜನಾ ಮಂದಿರದಲ್ಲಿ ಭಾನುವಾರ ಜರಗಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ಜಿ.ಪಂ.ಸದಸ್ಯೆ ಕಮಲಾಕ್ಷಿ, ಕಒಡ್ಲಮೊಗರು ಶಾಲಾ ಶಿಕ್ಷಕಿ ಪ್ರತಿಮಾ ಟೀಚರ್, ವರ್ಕಾಡಿ ಗ್ರಾ.ಪಂ.ಸದಸ್ಯೆ ಮಾಲತಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಕುಲಾಲ ಸಂಘದ ಕಾರ್ಯದರ್ಶಿ ಸತೀಶ್ ಮಡ್ವ, ಕುಲಾಲ ಮಹಿಳಾ ಘಟಕ ವರ್ಕಾಡಿ ಘಟಕದ ಅಧ್ಯಕ್ಷೆ ಜಾನಕೀ ದೈಗೋಳಿ, ಕುಲಾಲ ಸಂಘ ಪೈವಳಿಕೆ ಶಾಖಾ ಅಧ್ಯಕ್ಷ ಬಾಬು ಮೂಲ್ಯ ವಾದ್ಯಪಡ್ಪು ಉಪಸ್ಥಿತರಿದ್ದರು.
ಕುಲಾಲ ಸಂಘ ವರ್ಕಾಡಿ ಶಾಖೆ ಅಧ್ಯಕ್ಷ ಕೇಶವ ಕೊಡ್ಲಮೊಗರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಭಾಸ್ಕರ ಮಡ್ವ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಚರಣ್ ರಾಜ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. 2022-23 ನೇ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೇಶವ. ಕೆ. ಕೊಡ್ಲಮೊಗರು, ಉಪಾಧ್ಯಕ್ಷರಾಗಿ ವಸಂತ ದೈಗೋಳಿ, ಕಾರ್ಯದರ್ಶಿಯಾಗಿ ಭಾಸ್ಕರ ಮಡ್ವ, ಜೊತೆ ಕಾರ್ಯದರ್ಶಿಯಾಗಿ ಪ್ರಜ್ವಲ್ ದೈಗೋಳಿ, ಕೋಶಾಧಿಕಾರಿಯಾಗಿ ಚರಣ್ ರಾಜ್ ದೈಗೋಳಿ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರುತನ್ ದೈಗೋಳಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜಾನಕೀ ದೈಗೋಳಿ, ಕಾರ್ಯದರ್ಶಿಯಾಗಿ ಜಯಲಕ್ಷ್ಮಿ ದೈಗೋಳಿ, ಸಂಚಾಲಕರಾಗಿ ಬಾಬು ಮೂಲ್ಯ ದೈಗೋಳಿ ಹಾಗೂ ಇತರ ಹತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ವಂದಿಸಿದರು.