ಕಾಸರಗೋಡು: ವಿಶ್ವ ತಂಬಾಕು ವಿರುದ್ಧ ದಿನದ ಜಿಲ್ಲಾ ಮಟ್ಟದ ಉದ್ಘಾಟನೆ ಮೀನಾಪೀಸ್ ಪ್ರಾದೇಶಿಕ ಮೀನುಗಾರಿಕಾ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿತು. ಶಾಸಕ ಇ.ಚಂದ್ರಶೇಖರನ್ ಸಮಾರಂಭ ಉದ್ಘಾಟಿಸಿದರು.ನಗರಸಭಾ ವಾರ್ಡ್ ಕೌನ್ಸಿಲರ್ ಕೆ.ಜಾಫರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ.ರಾಮದಾಸ್ ದಿನಾಚರಣ ಸಂದೇಶ ನೀಡಿದರು. ಜಿಲ್ಲಾ ಆಸ್ಪತ್ರೆ ಪಿ.ಪಿ ಘಟಕ ವೈದ್ಯಕೀಯ ಅಧಿಕಾರಿ ಡಾ. ವಿ. ಅಭಿಲಾಶ್, ಜಿ.ಆರ್.ಎಫ್ ಟಿ.ಹೆಚ್.ಎಸ್ ಮುಖ್ಯೋಪಾಧ್ಯಾಯ ಸಿ.ಕೆ. ಅಜಯ್ ಕುಮಾರ್, ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಉಪಸ್ಥಿತರದ್ದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಮೇಲ್ವಿಚಾರಕ ಡಾ.ಪ್ರಕಾಶ್ ಕೆ.ವಿ ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಬೋಧನಾ ಗೋಷ್ಠಿ, ಧೂಮಪಾನ ರಹಿತ ಬೋಧನೆಗಳ ಸಂದೇಶಗಳಿರುವ ಬಲೂನ್ ಒಳಗೊಂಡ ಪಥಸಂಚಲನ, ಜೀವನ ಶೈಲಿ ರೋಗ ನಿರ್ಣಯ ಶಿಬಿರ ಆಯೋಜಿಸಲಾಯಿತು. ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಜಿಲ್ಲಾ ಕೋವಿಡ್ ನಿಯಂತ್ರಣ ಸೆಲ್ ಹೆಚ್.ಆರ್ ನೋಡಲ್ ಅಧಿಕಾರಿ ಡಾ. ಪ್ರಸಾದ್ ಥಾಮಸ್ ತರಗತಿ ನಡೆಸಿದರು. ಎಲ್ಲಾ ವರ್ಷವೂ ಮೇ 31 ರಂದು ವಿಶ್ವ ಆರೋಗ್ಯ ಸಂಘಟನೆ ವತಿಯಿಂದ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅಪಾಯ ಹಾಗೂ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಹಾನಿಕಾರಕ ಎಂಬ ಬಗ್ಗೆ ಈ ದಿನದಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ.