ಬದಿಯಡ್ಕ: ಭಾರತೀಯ ಮಾನವಹಕ್ಕು ಕೌನ್ಸಿಲ್ ನ ಜಿಲ್ಲಾಧ್ಯಕ್ಷರಾಗಿ ನಿವೃತ್ತ ವಾಯುಸೇನಾ ಉದ್ಯೋಗಿ ತಿರುಮಲೇಶ್ವರ ಭಟ್ ಎ ಆಯ್ಕೆಯಾಗಿದ್ದಾರೆ.
ತಿರುಮಲೇಶ್ವರ ಭಟ್ ಅವರು ಕಲ್ಲಕಟ್ಟ ಸಮೀಪದ ಪಜ್ಜ ನಿವಾಸಿಯಾಗಿದ್ದು, 18 ವರ್ಷ ಭಾ|ರತೀಯ ವಾಯುಸೇನೆಯಲ್ಲಿ ಉನ್ನತ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಕೌನ್ಸಿಲ್ ನ ರಾಷ್ಟ್ರೀಯ ಅಧ್ಯಕ್ಷ ಹಾಜಿ ಸಾಯಿಕ್ ಹಾಗೂ ಕಾರ್ಯಾಧ್ಯಕ್ಷ ರಾಜೇಂದ್ರ ಸಿಂಗ್ ವಾಲಿಯಾ ಅವರು ಈ ನೇಮಕಾತಿಗೆ ಅನುಮೋದನೆ ನೀಡಿದ್ದು, ಜಿಲ್ಲೆಯ ಸಮಗ್ರ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ದ ಹೋರಾಟ, ಮಹಿಳೆ, ಮಕ್ಕಳ ಕಲ್ಯಾಣಗಳಿಗೆ ಶ್ರಮಿಸುವುದಾಗಿ ತಿರುಮಲೇಶ್ವರ ಭಟ್ ತಿಳಿಸಿದ್ದಾರೆ.