HEALTH TIPS

ವಿಶ್ವದಲ್ಲೇ ಅತಿ ಹೆಚ್ಚು ಅಪಘಾತವಾಗುವುದು ಭಾರತದಲ್ಲಿ: ಸಾರಿಗೆ ಸಚಿವರು ನೀಡಿದ ಅಂಕಿ ಅಂಶ ಇಲ್ಲಿದೆ

 ನವದೆಹಲಿ: ಎಂಟು ಸೀಟಿನ ವಾಹನಗಳಿಗೆ ಆರು ಏರ್​ಬ್ಯಾಗ್​ ಇರಲೇಬೇಕೆಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ತಿಳಿಸಿದ್ದಾರೆ. ವಾಹನಗಳನ್ನು ಮತ್ತಷ್ಟು ಸುರಕ್ಷತೆ ಹೆಚ್ಚಿಸುವ ಅನಿವಾರ್ಯವಿದ್ದು, ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಿಂದಲೇ 5 ಲಕ್ಷಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವದಲ್ಲೇ ಭಾರತದಲ್ಲೇ ಅಧಿಕ ಮಂದಿ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಅಧಿಕವಾಗಿದ್ದು, ಇದಕ್ಕೆ ವಾಹನಗಳು ಸುರಕ್ಷತಾ ಕ್ರಮ ವೈಫಲ್ಯವೂ ಆಗಿವೆ. ವಾಹನ ತಯಾರಿಕಾ ಕಂಪನಿಗಳು ಈ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ ಎಂದುಉ ಅವರು ಹೇಳಿದ್ದಾರೆ.

ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ವಾಹನಗಳ ಸಂಖ್ಯೆಯೂ ಅಧಿಕವಾಗಿದ್ದು, ಶೇ.11ರಷ್ಟು ಸಾವಿನ ಪ್ರಮಾಣವೂ ಇದೆ. ಪ್ರತಿ ಗಂಟೆಗೆ 17ಮಂದಿ ಮೃತಪಡುತ್ತಿದ್ದು, 10 ಅಪಘಾತ ಪ್ರಕರಣದಲ್ಲಿ 6 ವಾಣಿಜ್ಯ ವಾಹನಗಳು ಸೇರಿದ್ದು, ಇದರಿಂದ ವರ್ಷಕ್ಕೆ 48,000ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ತಯಾರಾಗುವ ವಾಹನಗಳಿಗೆ ರೇಟಿಂಗ್​ ಕೂಡ ನೀಡಲಾಗುವುದು. ಜನರ ಸುರಕ್ಷತೆಯ ಮಾನದಂಡವನ್ನು ಆಧರಿಸಿ ಈ ರೇಟಿಂಗ್​ ಸಿಗಲಿದೆ. ಇದರಿಂದ ಅಪಘಾತವನ್ನು ತಡೆಗಟ್ಟುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ವಾಹನ ತಯಾರಕಾ ಖಂಪನಿಗಳು ಅಗತ್ಯವಾಗಿ ಈ ನಿಯಮ ಪಾಲಿಸಬೇಕು ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries