ಕೋಝಿಕ್ಕೋಡ್: ಸ್ತ್ರೀತ್ವಕ್ಕೆ ಅವಮಾನ ಮಾಡಿದ ದೂರಿನ ಮೇರೆಗೆ ಕಥೆಗಾರ ವಿಆರ್ ಸುಧೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಆಲಿವ್ ಪಬ್ಲಿಕೇಷನ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಸಂದರ್ಶನಕ್ಕಾಗಿ ಶಹನಾಜ್ ವಿಆರ್ ಸುಧೀಶ್ ಅವರನ್ನು ಭೇಟಿಯಾಗಿದ್ದರು.ಇ ವೇಳೆ ಅವರಿಗೆ ಅವಮಾನ ಮಾಡಲಾಯಿತು. ನಂತರ ಡಿಸಿಪಿ ಕಚೇರಿಗೆ ತೆರಳಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ನಡಕಾವು ಪೋಲೀಸರು ಶಹನಾಜ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ.