ಮುಳ್ಳೇರಿಯ: ಮೋಟಾರು ಕಾರ್ಮಿಕರ ಕ್ಷೇಮಾಭಿವೃದ್ಧಿ ನಿಧಿ ಮಂಡಳಿಯಲ್ಲಿ ಸದಸ್ಯರಾಗಿರುವ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಎಲ್ಲಾ ಆಸ್ಪತ್ರೆಗಳು ಪರಿಗಣಿಸಬೇಕು ಎಂದು ಮೋಟಾರು ಮತ್ತು ಇಂಜಿನಿರಿಂಗ್ ವರ್ಕರ್ಸ್ ಯೂನಿಯನ್ (ಎಸ್.ಟಿ.ಯು) ಜಿಲ್ಲಾ ಕೌನ್ಸಿಲ್ ಸಭೆ ಆಗ್ರಹಿಸಿದೆ. ಜಿಲ್ಲೆಯ ಒಂದೇ ಆಸ್ಪತ್ರೆಯಲ್ಲಿ ಪ್ರಸ್ತುತ ವೈದ್ಯಕೀಯ ಸೌಲಭ್ಯವಿರುವುದು ಸವಾಲಾಗುತ್ತಿರುವುದಾಗಿ ಯೂನಿಯನ್ ವಬೊಟ್ಟುಮಾಡಿದೆ.
ಈ ಬಗ್ಗೆ ಕಾಸರಗೋಡಲ್ಲಿ ನಡೆದ ಯೂನಿಯನ್ ನ ಜಿಲ್ಲಾ ಸಮ್ಮೇಳವನ್ನು ಎಸ್.ಟಿ.ಯು ರಾಷ್ಟ್ರೀಯ ಕಾರ್ಯದರ್ಶಿ ಎ.ಅಬ್ದುಲ್ ರೆಹೆಮಾನ್ ಕಾರ್ಯಕ್ರಮ ಉದ್ಘಾಟಿಸಿದರು. ಶರೀಫ್ ಕೊಡವಂಚಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎ.ಅಹ್ಮದ್ ಹಾಜಿ ಉಮರ್ ಅಪೋಲೋ ಅಮೀರ್ ಹಾಜಿ, ಜುಬೇರ್, ಅಬ್ದುಲ್ ರಹ್ಮಾನ್ ಹಾರಿಸ್ ಬೋವಿಕ್ಕಾನ, ಶಂಸೀರ್ ತೃಕ್ಕರಿಪುರ, ಕಲೀಲ್ ಪಡಿಂಜಾರ್, ಅಶ್ರಪ್ ಮುದಲಪ್ಪಾರ ಮಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ನೂತನ ಸಮಿತಿ ರೂಪಿಸಲಾಯಿತು. ಅಧ್ಯಕ್ಷರು ಶರೀಫ್ ಕೊಡವಂಜಿ, ಪ್ರಧಾನ ಕಾರ್ಯದರ್ಶಿ ಶಂಸೀರ್ ತೃಕರಿಪುರ, ಕೋಶಾಧಿಕಾರಿ ಅಶ್ರಫ್ ಮುದಲ್ಲಪ್ಪಾರ, ಉಪಾಧ್ಯಕ್ಷರು ಯೂಸುಫ್ ಹಾಜಿ ಪಟ್ಲ, ಮೊಯ್ದೀನ್ ಚೆಮ್ನಾಡು, ಮಜೀದ್ ಕುಂಜಾರು, ಮುಹಮ್ಮದ್ ಪಡನ್ನಕ್ಕಾಡ್, ಫಕ್ರುದ್ದೀನ್ ಸುಲ್ತಾನ್, ಇಸ್ಮಾಯಿಲ್ ಉಪ್ಪಳ, ಮಹಮ್ಮದ್ ಕುಂಞ ಕುಣಿಯ, ಕಾರ್ಯದರ್ಶಿಗಳು ರಶೀದ್, ಅನೀಫ್, ಸೂಫಿ ಕುಟ್ಟಿ ಏರಿಯಾಲ್, ಇಬ್ರಾಹಿಂ ಚೆಂಗಳ, ಅಶ್ರಫ್ ಎಂ.ವಿ ತೃಕ್ಕರಿಪುರ, ಹಾರಿಸ್ ಬಂದ್ಯೋಡು ಮೊಯ್ದೀನ್ ಹೊಸಂಗಡಿ ಅವರನ್ನು ಆಯ್ಕೆಮಾಡಲಾಯಿತು.