ಮಂಜೇಶ್ವರ: ಕುಂಜತ್ತೂರು ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿವೃತ್ತ ಶಿಕ್ಷಕ ಈಶ್ವರ ಮಾಸ್ತರ್ ದೈನಂದಿನ ಬದುಕಿನಲ್ಲಿ ಯೋಗಾಸನದ ಮಹತ್ವವನ್ನು ವಿವರಿಸುತ್ತಾ ಯೋಗಾಸನದ ಪ್ರಾತ್ಯಕ್ಷಿಕೆಯನ್ನು ನೀಡುವುದರ ಮೂಲಕ ಯೋಗ ದಿನಾಚರಣೆಗೆ ಚಾಲನೆಯನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ ವಹಿಸಿದ್ದರು. ಜನಮೈತ್ರಿ ಪೋಲಿಸ್ ಅಧಿಕಾರಿ ಮಧು ಹಾಗೂ ಶಾಲೆಯ ಹಿರಿಯ ಶಿಕ್ಷಕಿ ಲಲಿತಾ ಶುಭಹಾರೈಸಿದರು.ಮಂಜೇಶ್ವರ ಪೋಲಿಸ್ ಅಧಿಕಾರಿ ಸಲೀಂ ಉಪಸ್ಥಿತರಿದ್ದರು.ಶಿಕ್ಷಕಿಯರಾದ ಅನಿತಾ ಸ್ವಾಗತಿಸಿ, ಅಮಿತಾ ವಂದಿಸಿದರು. ಕವಿತಾ ನಿರೂಪಿಸಿದರು.